Tuesday, December 19, 2017

ಬುಜೀ ಒಬ್ಬರ ಕತೆ

ಬುದ್ಧಿ ಜೀವಿಗಳು ಬಹಳ ಅಲ್ಲದಿದ್ದರೂ ಸ್ವಲ್ಪ ಬುದ್ಧಿವಂತರು ಎನ್ನುವ ವಿಚಾರದಲ್ಲಿ ಯಾರಿಗೂ ಅನುಮಾನ ಇಲ್ಲ. ಪ್ರಚಾರ ಪಡೆಯಬೇಕು ಎಂದು ಒಮ್ಮೆ ತೀರ್ಮಾನಿಸಿದರೆ ಮುಗಿಯಿತು. ಅದನ್ನು ಪಡೆದೇ ಸಿದ್ಧ ಅವರು. ಹೀಗೆ ಪ್ರಚಾರಕ್ಕೆ ಬೇಕಾಗಿ ಏನೆಲ್ಲ ಓದುತ್ತಾರೆ, ಎಷ್ಟೆಲ್ಲ ಯೋಚಿಸುತ್ತಾರೆ. ಯೊಚಿಸದೇ ಇದ್ದರೆ ಸಂಸ್ಕೃತ ಶ್ಲೋಕಗಳನ್ನು ಮನಬಂದಂತೆ ಚಿತ್ರಿಸುವ ಸಾಧ್ಯತೆಯಾದರೂ ಎಂತು. ಇಂದು ಇಂಥಾ ಒಬ್ಬ ಬುದ್ಧಿಜೀವಿಯದ್ದೇ ಕತೆ ಹೇಳುತ್ತಿದ್ದೇನೆ.
ದಸರೆಯ ಸಂದರ್ಭದಲ್ಲಿ ಇವರ ಇಡೀ ಹಿಂಡು ಒಟ್ಟಾಗಿ ಮಹಿಷ ದಸರಾ ಆಚರಿಸುವ ಸಂಕಲ್ಪ ಮಾಡಿದರಲ್ಲ, ದಸರೆಯ ಸಮಯಕ್ಕೆ ನಾನು ಊರಿಗೆ ಹೋದಾಗ ನನ್ನ ದೊಡ್ಡಪ್ಪಂದಿರಲ್ಲಿ ಇದೇ ವಿಷಯ ಚರ್ಚೆ ಮಾಡಿದೆ. ಮಾತು ಮುಂದುವರೆಯಿತು. ಆ ಗಡಣದಲ್ಲಿದ್ದರು ಒಬ್ಬರು ನನ್ನ ಹಿಂದಿನ ತಲೆಮಾರಿನಲ್ಲಿ ಬಹುತೇಕರಿಗೆ ಅವರು ಮೇಷ್ಟ್ರು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ನಾನು ಮಾತಾಡುತ್ತಾ ಆಡುತ್ತಾ, ಸುಮ್ಮನೆ ಅಪ್ಪ ಮತ್ತು ದೋಡ್ಡಪ್ಪಂದಿರ ಕಾಲು ಎಳೆಯುವ ಸಲುವಾಗಿ, " ಯಂಗ ಎಂತ ಹೇಳದು, ನಿಂಗಳ ಮೇಷ್ಟ್ರಪ. ನಿಂಗ ಸರಿ ಕ್ಲಾಸಿಗೆ ಹೋಗಲೆ. ಅದಕ್ಕೆ ಅವರ ಹಂಗೆ ಆಗ್ಲೆ." ಎಂದೆ. 
ಆಗ ಒಬ್ಬರು ದೊಡ್ಡಪ್ಪ, "ತಡಿ ಹೇಳ್ತಿ ಯಂಗಳ ಮೇಷ್ಟ್ರ ಕತೆನ" ಎಂದರು. ಬರಹದ ಸರಕು ಖಾಲಿ ಮಾಡಿಕೊಂಡಿದ್ದ ನಾನು, ಬರಹಕ್ಕೆ ಏನಾದರೂ ಸರಕು ಸಿಕ್ಕೀತು ಎಂದು ಗೋಣಾಡಿಸಿದೆ.
ದೊಡ್ಡಪ್ಪ ಕತೆ ಹೇಳಿದರು.
"ಅವರು ಬಹಳ ಒಳ್ಳೆಯ ಮೇಷ್ಟ್ರು. ಅದರ ಬಗ್ಗೆ ಮಾತಿಲ್ಲೆ. ಪಾಠ ಚಂದ ಮಾಡ್ತಿದ್ದ. ಇಂಗ್ಲೀಷಿಗೆ ಬರ್ತಿದ್ದ ಅವರು. ನಮಗೆ ಅರ್ಥ ಆಗದ ವಿಷಯ ಅದು. ಅದು ಅವರಿಗೆ ಗೊತ್ತಿತ್ತು. ಅದಕ್ಕೇ ಅಭಿನಯಿಸಿ ಪಾಠ ಮಾಡ್ತಿದ್ದ. ಅವರ ಪಾಠ ಅಂದರೆ ಚನಾಗೇ ಇತ್ತು. ಯಂಗ ಎಂತಾರು ಗಲಾಟೆ ಮಾಡದು ಮಳ್ಳು ಹರೆಯದು ಎಲ್ಲ ಮಾಡಿರೆ ಎದ್ದು ನಿಲ್ಲಿಸಿ ಯಾವುದಾದರೂ ಶಬ್ದದ ಸ್ಪೆಲ್ಲಿಂಗ್ ಕೇಳ್ತಿದ್ದ. ಮಜಾ ಅಂದರೆ, ಎಲ್ಲರೂ ಆ ಸ್ಪೆಲ್ಲಿಂಗ್ ಹೇಳ್ತಿದ್ದ. ಹಂಗಾಗಿ ಅವರು ಎಂತ ಬೈತಿದ್ದ ಅಂತ ಯಾರಿಗೂ ಗೊತ್ತಾಗ್ಲೆ. ಎಂತಕ್ಕೆ ಅಂದರೆ ಎಲ್ಲರೂ ಆ ಸ್ಪೆಲ್ಲಿಂಗ್ ಹೇಳ್ತಿದ್ದ."
ಈಗ ನನ್ನ ತಲೆಯೊಳಗೆ ಒಂದು ಹುಳ ಹೊಕ್ಕುಬಿಟ್ಟಿತು. ಅಂಥಾ ಮೇಷ್ಟ್ರು ಹೀಗೇಕಾದರು ಅಂತ. ಕೆಲಸ ಇಲ್ಲದ್ದರಿಂದ ಸುಮ್ಮನೆ ಯೋಚಿಸುತ್ತಾ ಕುಳಿತೆ. ಯೋಚನೆಗಳು ಒಂದೊಂದೆ ಬಂದು ನನ್ನ ತಲೆಯೊಳಗಿನ ಹುಳ ಕೊಂದು ಈ ಬರಹಕ್ಕೆ ಸರಕು ಕೊಟ್ಟವು.
ಕಾಲದಲ್ಲಿ ಕಾಲೇಜಿಗೆ ಹೋಗುತ್ತಿದ್ದವರೆಲ್ಲಾ ಮೇಲು ವರ್ಗದವರೇ ಆಗಿದ್ದರು. ಅದರಲ್ಲೂ ಬ್ರಾಹ್ಮಣರು. ಈ ಬ್ರಾಹ್ಮಣರು ಅಪ್ಪಿ ತಪ್ಪಿ ಸ್ವಲ್ಪ ಓದಿ, ತಾನು ಕೇಳಿದ ಯಾವ ಪ್ರಶ್ನೆಗೂ ತಪ್ಪು ಉತ್ತರ ಹೇಳದೇ ತನ್ನೊಳಗಿನ ಬಯ್ಗುಳವನ್ನೆಲ್ಲಾ ಹಾಗೆಯೇ ಬಿಟ್ಟುಬಿಟ್ಟರು, ನಿಜ ಈ ಬ್ರಾಹ್ಮಣರು ತನ್ನೊಳಗಿನ ಕ್ರೋಧವನ್ನು ದಮನಿಸಿದಂತೆಯೇ ತಲತಲಾಂತರದಿಂದ ಸಮಾಜವನ್ನು ದಮನಿಸಿದ್ದಾರೆ. ತನ್ನವರೇ ಆದರೂ ಈ ಜನಾಂಗ ತನ್ನ ನೋವನ್ನು ಹೊರ ಹಾಕುವ ಅವಕಾಶ ಕೊಡದೆ ಅದನ್ನು ದಮನಿಸಿದರು. ಹಾಗಾಗಿ ನಾನು ಕೂಡಾ ದಮನಿತನೇ ಆದೆ, ಇನ್ನು ತಾನು ದಮನಿತರ ಪರ ನಿಂತು ಈ ಬ್ರಾಹ್ಮಣರನ್ನು, ಇವರನ್ನು ಒಳಗಿಟ್ಟುಕೊಂಡ ಹಿಂದೂ ಧರ್ಮವನ್ನು, ಇದರ ನಂಬಿಕೆಗಳನ್ನು, ಇದರ ಆಚರಣೆಗಳನ್ನು, ಎಲ್ಲವನ್ನೂ ಹಿಗ್ಗಾ ಮುಗ್ಗಾ ಝಾಡಿಸಿ-ನಿಂದಿಸಿ-ದೂಷಿಸಿ ಈ ಸೇಡನ್ನು ತೀರಿಸಿಕೊಳ್ಳುತ್ತೇನೆ. ಸೂಕ್ತ ಕಾಲಕ್ಕಾಗಿ ಕಾದು ನಂತರ ಇದೆಲ್ಲವನ್ನೂ ಮಾಡುತ್ತೇನೆ ಎಂದು ತೀರ್ಮಾನಿಸರಬೇಕು ಆ ಮಹಾನ್ ಚಿಂತಕರು.
ಕೆಲವರಿಗೆಲ್ಲಾ ಗೊತ್ತಾಗಿರಬೇಕು ಈ ಚಿಂತಕ ಅಧ್ಯಾಪಕರು ಯಾರು ಅಂತ. ಗೊತ್ತಿಲ್ಲದವರಿಗೆ ಹೇಳಿ ಬಿಡುತ್ತೇನೆ. ಇವರು ಜಿ. ಕೆ. ಗೋವಿಂದರಾಯರು, ನಮ್ಮ ನಿಮ್ಮ ಪ್ರೀತಿಯ ಗೋತಿಂದರಾಯರು!!
ಹೌದು. ಮೂಢನಂಬಿಕೆಗಳನ್ನು ಇಷ್ಟೆಲ್ಲಾ ತೆಗಳುವ, ದೂಷಿಸುವ ಗೋತಿಂದರಾಯರು, 'ರೆ....' ಚಿತ್ರದಲ್ಲಿ ಭೂತನ ಪಾತ್ರ ನಿರ್ವಹಿಸಿದ್ದರು. ಇದು ಮೂಢನಂಬಿಕೆಗೆ ಬೆಂಬಲಿಸಿದ್ದಾ ಅಥವಾ ಅದರ ಬಗ್ಗೆ ಉರಿಯೋ ಅಥವಾ ದುಡ್ಡಿನಾಸೆಯೋ, ಅಥವಾ ಕಲಾಸಕ್ತಿಯೋ ಆ ಗೋವಿಂದನೇ ಉತ್ತರಿಸಬೇಕು.

No comments:

Post a Comment