Tuesday, December 12, 2017

ಮಾಧ್ಯಮ ನ್ಯಾಯ 3

ನಾನು ನನ್ನ ಪರೀಕ್ಷೆಗಳನ್ನು ಬಿಟ್ಟರೆ ಹೀಗೆ ಬೆನ್ನತ್ತಿ ಬರೆದದ್ದು ಯಾವುದೂ ಇಲ್ಲ. ನನಗೇ ಈ ರೀತಿ ಬೆನ್ನು ಹತ್ತಿ ಬರೆಯುವುದು ಬೇಸರ ತರಿಸುತ್ತಿದೆ. ಓದುವ ಕೆಲವರಿಗೆ ಇದು ಇಷ್ಟವೂ ಆಗಬಹುದು ಕೆಲವರಿಗೆ ಬರೆದ ವಿಚಾರವನ್ನೇ ಮತ್ತೆ ಬರೆದ ಎನ್ನಿಸಲೂ ಬಹುದು.ಕ್ಷಮೆ ಕೇಲುತ್ತೆನೆ ಅಂಥವರಲ್ಲಿ. ನನಗೂ ಈ ವಿಚಾರದ ಬಗ್ಗೆ ಬರೆಯಲೇ ಬೇಕು ಎನ್ನುವ ಹಟ ಏನೂ ಇಲ್ಲ. ಉತ್ತರ ಕನ್ನಡದಲ್ಲಿ ಈಗಾಗಲೇ ಕದಡಿದ ಶಾಂತಿ ರಾಡಿಯಾಗಲಿ ಎನ್ನುವ ಉದ್ದೇಶ ಇಲ್ಲವೇ ಇಲ್ಲ. ಮಾಧ್ಯಮಗಳ ವರ್ತನೆ, ಪೋಲೀಸರು ನಡೆದುಕೊಂಡ ರೀತಿ,ಮಂತ್ರಿಗಳು ಅನ್ನಿಸಿಕೊಂಡವರು ಕೊಟ್ಟ ಹೇಳಿಕೆಗಳು ಮತ್ತೆ ಅವರ ನಡತೆ ನನಗೆ ಪ್ರಶ್ನೆಗಳನ್ನಷ್ಟೆ ಹುಟ್ಟಿಸಿವೆ.

ನಿನ್ನೆ ಬರಹವನ್ನು ಫ಼ೇಸ್ ಬೊಕ್ಕಿನಲ್ಲಿ ಹಾಕಿ ನಂತರ ವಾಟ್ಸಾಪ್ಪಿನಲ್ಲಿ ಬಂದ ಮೆಸೇಜ್ಗಳತ್ತ ಕಣ್ಣು ಹಾಯಿಸಿದಾಗ ಬಂದಿತ್ತು-"ಇದು ಪರೇಶನ ಪೋಸ್ಟ್ ಮಾರ್ಟಮ್ ರಿಪೋರ್ಟ್" ಎನ್ನುವ ಒಂದು ಸಂದೇಶ, ಅದರ ಕೆಳಗೆ ಅಂಟಿಕೊಂಡಿದ್ದ ಆ ರಿಪೋರ್ಟಿನ ಫೋಟೊಗಳು.
ನೋಡಿ ಸುಮ್ಮನಾಗಬೇಕಿತ್ತು. ಆಗಲಿಲ್ಲ. ಅದನ್ನು ಓದಿದೆ. ನಾನು ವಾಣಿಜ್ಯ ಓದಿದವ. ಅದರಲ್ಲಿ ಬರೆದ ಕೆಲವು ಶಬ್ದಗಳು ಅರ್ಥವೇ ಆಗಲಿಲ್ಲ. ಅದನ್ನೂ ಆ ಗ್ರೂಪಿನಲ್ಲೇ ಒಬ್ಬರ ಹತ್ತಿರ ಕೇಳಿ ತಿಳಿದೆ. ಆಗ ನನಗೆ ಅರ್ಥವಾಗಿದ್ದು ಇಷ್ಟೆ. ಪರೇಶನ ಸಾವು ಅನುಮಾನಾಸ್ಪದವೇ ಹೊರತು ಕೊಲೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಅಂತನ್ನುವ ರೀತಿ ಆ ರಿಪೋರ್ಟ್ ಇತ್ತು. ಅಂತೂ ಇದನ್ನೂ ಡಿ. ಕೆ ರವಿ, ಗಣಪತಿ, ಬಂಡೆ, ಹಂಢಿಭಾಗ್ ರೀತಿ ಮಾಡಿದರು ಅಂದುಕೊಂಡು ಬಿಟ್ಟು ಹಾಕಿದ್ದೆ.

ಬೆಳಗ್ಗೆ ಫೇಸ್ ಬುಕ್ಕಿನಲ್ಲಿ ನಾನು ಹಾಕಿದ ಪೋಸ್ಟಿಗೆ ರಿಪ್ಲೈ ಆಗಿ ಅದೇ ಚಿತ್ರಗಳು ಜೊತೆಯಲ್ಲಿ ಒಂದು ಚಾನೆಲ್ಲಿನಲ್ಲಿ ಬಂದ ಚಿತ್ರವೂ ಇತ್ತು. ಜೊತೆಯಲ್ಲೇ ನನಗೊಂದು ವಾಟ್ಸ್ ಅಪ್ ಸಂದೇಶ ಇತ್ತು. "ಪರೇಶನ ಸಾವಿನ ಬಗ್ಗೆ, ಹೊನ್ನಾವರದ ಘಟನೆಗಳ ಬಗ್ಗೆ ಏನೂ ಬರೆಯದು ಬ್ಯಾಡ, ಪೋಲೀಸರು ಆ ಸಂದೇಶಗಳಿಂದಾಗಿಯೇ ಗಲಭೆ ಹತ್ತಿದ್ದು ಅಂತ ಭಾವಿಸಿ ಅಂಥಾ ಮೆಸೆಜ್ ಕಳಿಸಿದವರನ್ನು ಸೆರೆ ಮಾಡುವ ಸಾಧ್ಯತೆ ಇದೆ ಅಂತ". ಆಡಿಟರ್ ಬುದ್ಧಿಯೇ ಹಾಗೆ. ಎಲ್ಲವನ್ನೂ ಬಿಡಿ ಬಿಡಿಯಾಗಿ ಪ್ರಶ್ನಿಸಿ ಒಟ್ಟಾಗಿ ಉತ್ತರ ಕಂಡುಕೊಳ್ಳುವುದು.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಿಷೇಧಿಸಿದ ಪೋಲೀಸ್ ಮಹಾನಿರ್ದೇಶಕರು, ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೊರಹೋಗುವಂತೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಬಂತು. ಮತ್ತೆ  ರಿಪೋರ್ಟಿನ ಚಿತ್ರಗಳನ್ನು ತೆಗೆದು ನೋಡಿದೆ. ಅದು ಪೋಸ್ತ್ ಮಾರ್ಟಮ್ ರಿಪೋರ್ಟ್ ಅಲ್ಲವೇ ಅಲ್ಲ. ಅದರ ಬಗ್ಗೆ ಪೋಲೀಸರು ವೈದ್ಯರಲ್ಲಿ ಕೇಳಿ ಪಡೆದ ಸ್ಪಷ್ಟೀಕರಣ ವರದಿ ಅದು. ವೈದ್ಯರು ಹೆಚ್ಚಿನ ಉತ್ತರಗಳಿಗೆ ಪೋಸ್ಟ್ ಮಾರ್ಟಮ್ ವರದಿಯನ್ನು ಉಲ್ಲೇಖಿಸಿದ್ದಾರೆ. ಹಾಗಾಗಿ ಸ್ಪಷ್ಟೀಕರಣದ ವಿಶ್ಲೇಷಣೆ ಮೂಲ ವರದಿ ಇಲ್ಲದೆ ಸಾಧ್ಯವಿಲ್ಲ. ಪೋಲೀಸರು ಮೂಲ ವರದಿ ಹೊರ ಹಾಕದೆ, ಅದರ ಮೇಲಿನ ಸ್ಪಷ್ಟೀಕರಣ ಮಾತ್ರ ಹೊರ ಹಾಕಿದ್ದು ಯಾಕೆ ಅಂತ ಗೊತ್ತಾಗುತ್ತಿಲ್ಲ. ಮಾಧ್ಯಮಗಳು, ಎಲ್ಲಾದರ ಮೂಲ ಹುಡುಕುತ್ತಾರೆ. ಇಲ್ಲಿ ಮಾತ್ರ ಸ್ಪಷ್ಟೀಕರಣವನ್ನು ಮಾತ್ರ ಹಿಡಿದು ಝಾಡಿಸುತ್ತಿದ್ದಾರೆ.

ಇದು ಅವರ ಎಂದಿನ ಪಕ್ಷಪಾತ ಧೋರಣೆ ಅಂತ ಬಿಡುವ ಹಾಗೂ ಇಲ್ಲ. ಯಾಕೆಂದರೆ ಸ್ಪಷ್ಟೀಕರಣ ನಿನ್ನೆ ಅಂದರೆ ೧೧-೧೨-೨೦೧೭ರ ದಿನಾಂಕದ್ದು. ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡ ಪೋಲೀಸ್ ಇಲಾಖೆ ಸ್ಪಷ್ಟೀಕರಣವನ್ನು ಮರಣೊತ್ತರ ಪರೀಕ್ಷೆ ನಡೆದ ದಿನವೇ ಪಡೆದು ಹಂಚದೇ ಕೊನೆಗೆ ಪಡೆದಿದ್ದು ಮತ್ತು ತರಾತುರಿಯಲ್ಲಿ ಹಂಚಿದ್ದು ಕೂಡಾ ಮಾಧ್ಯಮಗಳಿಗೆ ಅನುಮಾನವಾಗಿ ಕಾಣುತ್ತಿಲ್ಲ. ಇವರು ಏನಿದ್ದರೂ ಯಾವುದಾದರೂ ಅನೈತಿಕ ಸಂಬಂಧದ ಅಥವಾ ಚಿತ್ರ ನಟ ನಟಿಯರ ಮದುವೆ ಸಮಾರಂಭದ ಸುದ್ದಿಗೇ ಲಾಯಕ್ಕು ಅನ್ನಿಸುತ್ತಿದೆ.

ಸ್ಪಷ್ಟೀಕರಣದ ವರದಿಯಲ್ಲಿ ಉಲ್ಲೇಖವಾದ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾತುಗಳೇ ಆಗಿವೆ. ಹಾಗಾದರೆ, ಪೋಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾತುಗಳನ್ನೇ ತಮ್ಮ ಅನುಮಾನಗಳಾಗಿ ಸ್ವೀಕರಿಸಿದರಾ ಎನ್ನುವ ಅನುಮಾನ ಯಾರಿಗೂ ಮೂಡುತ್ತದೆ.

ಆ ವರದಿ ಕೊಟ್ಟಿದ್ದು ಪೋಸ್ಟ್ ಮಾರ್ಟಮ್ ಮಾಡಿದ ಮಣಿಪಾಲದ ಆಸ್ಪತ್ರೆಯ ವೈದ್ಯರು. ಹೊನ್ನಾವರ-ಕುಮಟಾದಲ್ಲಿ ಸರಕಾರಿ ಆಸ್ಪತ್ರೆಗಳಿಲ್ಲವೇ? ಅಲ್ಲಿ ಇಷ್ಟು ದಿನ ನಡೆದ ಆತ್ಮಹತ್ಯೆ-ಕೊಲೆಗಳ ಪೋಸ್ಟ್ ಮಾರ್ಟಮ್ ಮಡಿಲ್ಲವೇ ಎನ್ನುವ ಅನುಮಾನಗಳು ಮೂಡುತ್ತವೆ. ಇನ್ನು ಅಲ್ಲಿನ ಆಸ್ಪತ್ರೆಗಳು ವಿಸ್ವಾಸಾರ್ಹವಲ್ಲ ಎಂದು ಯೋಚಿಸಿದರೆ, ಆ ವರದಿಗಳನ್ನಾಧರಿಸಿ ಮುಚ್ಚಿದ ಕೇಸುಗಳ ಸತ್ಯಾಸತ್ಯತೆ ಏನು ಎನ್ನಿಸುತ್ತದೆ. ಹೋಗಲಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿರುವ ಭಟ್ಕಳದಲ್ಲಿಯೂ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಅಹಿಂದ ಪರ ಸರಕಾರ ಯಾಕೆ ಮಾಡಲಿಲ್ಲ ಎಂದು ಯಾವ ಮಾಧ್ಯಮವೂ ಪ್ರಶ್ನಿಸಿಲ್ಲ. ಕಾರಣ ಗೊತ್ತಿಲ್ಲ.

ಮುಖ ಕಪ್ಪಾಗಿದ್ದು ಶವ ಬಹುಕಾಲ ನೀರಿನಲ್ಲಿ ಇದ್ದಿದ್ದರಿಂದ ಎಂದು ಹೇಳುತ್ತಾರೆ, ಶವ ಎರಡೆ ದಿನ ನೀರಿನಲ್ಲಿದ್ದಿದ್ದು ಇಷ್ಟೆಲ್ಲಾ ವಿರೂಪವಾಗಲು ಸಾಧ್ಯವಿಲ್ಲ ಎನಿಸುತ್ತದೆ. ಕೊಳೆತ ಶವದ ಮುಂಗೈನಲ್ಲಿದ್ದ ಹಚ್ಚೆ ಹಾಗೆಯೇ ಇದೆ ಎನ್ನುತ್ತದೆ ಸ್ಪಷ್ಟೀಕರಣ. ಇದು ಸಾಧ್ಯವಾದರೆ ಹೇಗೆ ಎನ್ನುವ ಅನುಮಾನ ಪೋಲೀಸರಿಗೆ ಮೂಡಿಲ್ಲವೇ? ಮೂಡಿದ್ದರೆ ಸ್ಪಷ್ಟೀಕರಣ ಪಡೆದಿದ್ದಾರೆಯೇ? ಪಡೆದಿದ್ದರೆ ಅದನ್ನು ಯಾಕೆ ಹರಿಬಿಡಲಿಲ್ಲ? ಮಾಧ್ಯಮಗಳೂ ಇದನ್ನು ಪ್ರಶ್ನಿಸದೇ ಇದ್ದಾಗ ನಾವು ಅವರ ಬದ್ಧತೆ ಬಗ್ಗೆ ನಮ್ಭುವುದು ಕಷ್ಟ.

ಹಾಗಂತ ಸ್ಪಷ್ಟೀಕರಣ ಒಂದು ವಿಕ್ಷಿಪ್ತ ಸಂಗತಿ ಹೊಂದಿದೆ. ಪರೇಶನ ವೃಷಣಗಳನ್ನು ಸೀಳಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಹೇಳಿದ್ದಾರೆ. ಅದನ್ನು ಪ್ರಶ್ನಿಸಿದ್ದಾರೆ ಪೋಲೀಸರು, ಆದರೆ ಅದರ ಕಾರಣವನ್ನಲ್ಲ. ಆದರೆ ಸ್ಪಷ್ಟೀಕರಣ ಆ ಕಾರಣವನ್ನೂ ಕೊಟ್ಟಿದೆ. ಶವ ಕೊಳೆತು ಹೀಗಾಗಿದೆ ಎಂದು. ಸ್ವಲ್ಪ ಅಶ್ಲೀಲವಾಗಿದೆ ಅನುಮಾನ. ಕ್ಷಮೆ ಇರಲಿ. ಪ್ಯಾಂಟ್, ಅದರ ಒಳಗೆ ಒಂದು ಅಂಡರ್ವೇರ್, ಇದರ ಒಳಗಿರುವ ವೃಷಣ ಕೊಳೆಯುತ್ತದೆ ಮತ್ತು ಕೊಳೆತು ಸೀಳಲ್ಪಡುತ್ತದೆ ಅಂದರೆ ಆ ಕೆರೆಯ ನೀರಿನಲ್ಲಿ ಯಾವುದೋ ಭಯಂಕರ ರಾಸಾಯನಿಕವೇ ಇರಬೇಕಲ್ಲ. ಆ ಕುರಿತು ಲೋಕೊಪ್ಯೋಗಿ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಅಥವಾ ಸಂಬಂಧಿಸಿದ ಇನ್ಯಾವುದೇ ಇಲಾಖೆಯಾಗಲೀ ವರದಿ ಸಲ್ಲಿಸಿತ್ತೇ ಮೊದಲು? ಇಲ್ಲವಾದರೆ ಯಾಕೆ? ಅಥವಾ ಸ್ಥಳೀಯರು ಯಾರೂ ದೂರು ಕೊಟ್ಟಿಲ್ಲವೇ?

ಶವ ನೀರಿನಲ್ಲಿ ಸಿಕ್ಕಾಗ ಜಲಚರಗಳು ಶವದ ಭಾಗಗಳನ್ನು ತಿಂದು ಹಾಕುವುದು ಸಹಜ. ಎರಡೆ ದಿನದಲ್ಲಿ ಶವ ಕೊಳೆಯುತ್ತದೆ. ಆದರೆ ಜಲಚರಗಳು ಅದನ್ನು ತಿಂದ ಬಗ್ಗೆ ಪೋಲೀಸರು ಸ್ಪಷ್ಟೀಕರಣದಲ್ಲಿ ಉಲ್ಲೇಖಿಸಿಲ್ಲ. ಸ್ಪಷ್ಟೀಕರಣ ಎಲ್ಲಿಯೂ ಜಲಚರಗಳ ವಿಚಾರ ಎತ್ತದೆ ಕೇವಲ ಶವ ಕೊಳೆತದ್ದನ್ನು ಮಾತ್ರ ಹೇಳುತ್ತದೆ. ಮಾಧ್ಯಮಗಳಿಗೂ ಅನುಮಾನ ಬರುವುದಿಲ್ಲ. ಸಹಜ ಬಿಡಿ.

ಕೊಳೆತ ಶವದ ಬಟ್ಟೆಯೊಳಗಿದ್ದ ವ್ರೂಷಣವನ್ನು ಸೀಳುವ ಶಕ್ತಿಯಿದ್ದ ರಾಸಾಯನಿಕ ಅದರಲ್ಲಿತ್ತು ಅಂತಲೇ ಒಪ್ಪಿದರೆ, ಶವದ ಕಣ್ಣಿಗೆ ಏನೂ ಹಾನಿಯಾಗಲಿಲ್ಲ. ಮುಂಗೈ ಮೇಲಿನ ಹಚ್ಚೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ರಾಸಾಯನಿಕ ಬಟ್ಟೆಯ ಮೇಲೆ ಮಾತ್ರ ಕೆಲಸ ಮಾಡುತ್ತದೆ ಅಂತಾಯಿತು. ಚರ್ಮದ ಮೇಲೆ ಅಲ್ಲ ಅಂದರೆ ಸಂಶೋಧನೆಯೇ ನಡೆಯಬೇಕು. ಜಲಚರಗಳೂ ಕಣ್ಣನ್ನು ತಿಂದಿಲ್ಲ ಇದು ಹೇಗೆ ಸಾಧ್ಯ. ಆ ರಸಾಯನಿಕ ಬೆಂಗಳೂರಿನ ಕಸದ ಸಮಸ್ಯೆ ಬಗೆ ಹರಿಸೀತು. ಸಂಶೊಧನೆ ಮಾಡಿ ಅದನ್ನು ಉತ್ಪಾದಿಸುವ ಬಗೆ ಅರಿಯುವುದು ಒಳಿತು.
ಮತ್ತೆ ಆ ರಾಸಾಯನಿಕ ಬಂದು ಸೇರಿದ್ದು ಹೇಗೆ. ನನಗೆ ಗೊತ್ತಿರುವಂತೆ ಅಲ್ಲಿ ಅಂಥಾ ದೊಡ್ಡ ಕಾರ್ಖಾನೆ ಇಲ್ಲ. ಸಮುದ್ರ-ನದಿ ಇರುವಾಗ ಕೆರೆಗೆ ತ್ಯಾಜ್ಯ ಬಿಡುವುದೂ ಇಲ್ಲ.ಶವ ಕೊಳೆತಿದೆ ಅಂತಾದರೆ, ಕಣ್ಣು ಪ್ರಖರತೆ ಹೊಂದಲು ಸಾಧ್ಯವೇ ಇಲ್ಲ.

ಮತ್ತೆ ಕೆರೆ ಹೊನ್ನಾವರದ ಬಸ್ ಸ್ಟಾಪ್ ಪಕ್ಕದಲ್ಲಿಯೇ ಇದೆಯಂತೆ. ಬಸ್ ಸ್ಟಾಪ್ಗಳು ಸಾಮಾನ್ಯವಾಗಿ ರಾತ್ರಿ ೯-೧೦ ಗಂಟೆಯ ತನಕ ಜನನಿಬಿಡವಾಗಿರುತ್ತವೆ. ಅಲ್ಲಿ ಪರೇಶ ಬೀಳುವಾಗ ಕೂಗಿದ್ದು ಕೇಳಲ್ಲಿಲ್ಲವೇ? ಅಷ್ಟು ಹೊತ್ತಿನ ನಂತರ ಅಂಥಾ ಕಡೆ ಹದಿವಯಸ್ಸಿನ ಹಸುಳೆಗೆ ಯಾವ ಕೆಲಸವೂ ಇರುವುದಿಲ್ಲ.

ಶವವನ್ನು ದಹನ ಮಾಡಿದ ನಂತರ ಸ್ಪಷ್ಟೀಕರಣ ಕೇಳಿದ್ದು ಯಾಕೆ? ಪೋಲೀಸ್ ಮಹಾ ನಿರ್ದೇಶಕರಿಗೆ ತಾವೆ ಸ್ವಯಂ ಹಾಜರಾಗಬೇಕು ಅಂಥ ವಿಕೋಪ ಪರಿಸ್ಥಿತಿಯಾಗಲಿದೆ ಅಂತ ತಿಳಿಯುತ್ತದೆ. ಸ್ಥಳೀಯ ಪೋಲೀಸ್ ಅಧಿಕಾರಿಗಳಿಗೆ ಪರೇಶನ ಮನೆಯವರನ್ನು ಸೆರೆಯಲ್ಲಿಡಲು ಗೊತ್ತಾಗುತ್ತದೆ. ಇದು ತಿಳಿದಿಲ್ಲ ಯಾಕೆ?

ಅನಂತ ಕುಮಾರ ಹೆಗಡೆಯವರಿಗೆ ರಕ್ಷಣೆ ಕಷ್ಟ ಎಂದ ಪೋಲೀಸ್ ಇಲಾಖೆ, ಇಂದಿನ ಸಾಮರಸ್ಯ ನಡಿಗೆಗೆ ಸೂಕ್ತ ರಕ್ಷಣೆ ಸಾಧ್ಯ. ಇದು ಚೋದ್ಯವೋ ಕುಚೋದ್ಯವೋ ಗೊತ್ತಿಲ್ಲ.

ಪರೇಶ ಹಿಂದೂ ಸಂಘಟನೆಯ ಕಾರ್ಯಕರ್ತ ಅಲ್ಲ ಅಂತ ಅವನ್ ತಂದೆಯವರು ಹೇಳುತ್ತಾರೆ ಅದನ್ನು ಒತ್ತಿ ಒತ್ತಿ ಹೇಳಲಾಗುತ್ತದೆ. ಆದರೆ ಅವರೇ ಅವನ ದೇಹದ ಮೇಲೆ ಗಾಯದ ಗುರುತು ಇದ್ದಿದ್ದನ್ನು ಹೇಳುತ್ತಾರೆ. ಇದು ಹೇಗೆ ಸಾಧ್ಯ.

thatskannada.com ಎನ್ನುವ ವೆಬ್ ಸೈಟಿನಲ್ಲಿ ಹಿಂದೂಗಳು ಕಲ್ಲೆಸೆದದ್ದು ಅಂತ ಬರೆಯುತ್ತಾರೆ. ಶರತ್ ಮಡಿವಾಳನ ಕೊಲೆ ಮಾಡಿದವರ ಧರ್ಮ, ಅಂದು ಗಲಭೆ ಎಬ್ಬಿಸಲು ಕಲ್ಲು ಸಂಗ್ರಹಿಸಿದವರ ಮತ ತಿಳಿಯುವುದೇ ಇಲ್ಲ. ಈ ಮಾಧ್ಯಮಗಳ ಖರೀದಿ ದರ ಎಷ್ಟಿರಬಹುದು ಹಾಗಾದರೆ.

ರಂಗಣ್ಣನಿಗೆ ಇದು ಆಲ್ ರೈಟ್. ಮೊದಲು ಅವರ ಜೊತೆ ಕುಳಿತು ಸಾರ್ ಅದು ಎಂಗೆ? ನೀವು ಏನೇ ಏಳಿ ... ನಾನು ಏಳೊದು ಏನಪ್ಪ ಅಂದ್ರೆ..... ಓಗ್ಲಿ ಬಿಡಿ ಎಂದೆಲ್ಲಾ ಅಂದ ಈರೇಗೌಡತಿ(ಹೀರೇಗೌಡತಿ) ಇರುವ ವಾಹಿನಿ ಅಸಹಜ ಸಾವು ಎನ್ನುವುದನ್ನೇ ಮತ್ತೆ ಹೇಳುತ್ತದೆ.
ಇನ್ನು ಒಂಭತ್ತನೇ ನಂಬರಿನವರು ಬಿಡಿ ಎಂದೋ ಒಂದು ದಿನ ಅವರಿಗೆ ಈ ಎಲ್ಲ ಚಕಿತಗಳ ಮಧ್ಯೆ ಕಟ್ಟ ಕಡೆಯಲ್ಲಿ ಹೀಗೂ ಉಂಟೇ ಎನ್ನುವ ಪ್ರಶ್ನೆ ಕಾಡುತ್ತದೆ. ಉತ್ತರ ಗೊತ್ತಿಲ್ಲ. ಉತ್ತರ ಕುಮಾರರಲ್ಲವೇ?

ಆದರೆ, ಮು.ಮಂ ಹೇಳುತ್ತಾರೆ,   "ಪೋಸ್ಟ್ ಮಾರ್ಟಮ್ ವರದಿಯೇ ಬಂದಿಲ್ಲ. ಕೊಲೆ ಅಂತ ಹೇಗೆ ಹೇಳೋದು?" ಅಂತ. ಬಾರದ ವರದಿಯ ಸ್ಪಷ್ಟೀಕರಣ ಎಷ್ಟು ನಂಬಲರ್ಹ?

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮೇಲೆ ಒಂದು ರೀತಿಯ ನಿರ್ಬಂಧ ಇದೆ. ಆದರೆ ಇದು ವಾಕ್ ಸ್ವಾತಂತ್ರ್ಯದ ಕಗ್ಗೊಲೆ ಅಂತ ಯಾರಿಗೂ ಅನ್ನಿಸಲೇ ಇಲ್ಲ. ಈ ಸೋಷಿಯಲಿಸಮ್ ಅಪ್ಪಿದವರಿಗೆ ಫ಼್ಯಾಸಿಸಮ್ ಕಾಣುವುದು ಬಹುಷಃ ಅವರಿಗೆ ಬಾಯಿ ಮುಚ್ಚುವ ಪರಿಸ್ಥಿತಿ ಬಂದಾಗ ಮಾತ್ರ. ಬುದ್ಧಿ ಜೀವಿಗಳಿಗೆ ರಾಮ ಕೃಷ್ಣರ ಹುಟ್ಟು ಪ್ರಶ್ನಿಸಲು ಸಾಧ್ಯವಾಗುತ್ತದೆ. ಇಲ್ಲಿ ಮೌನ ವ್ರತ. ರಾಮ ಕುಡುಕ ಸ್ತ್ರೀ ಲೋಲ ಎಂದೆಲ್ಲಾ ಇವರಿಗೆ ಹೊಳೆದು ಬಿಡುತ್ತದೆ. ಇಂಥಾ ವಿಚಾರಗಳು ತಿಳಿಯುವುದೇ ಇಲ್ಲ. ಬಾಯಲ್ಲಿ ಏನು ಇಟ್ಟುಕೊಂಡಿದ್ದಾರೋ ಎನೋ? ಬಾಯಿ ಕಳೆಯುವುದಿಲ್ಲ ನಮಗೆ ತಿಳಿಯುವುದಿಲ್ಲ.

ಉತ್ತರ ಕನ್ನಡ ಹೊತ್ತಿ ಉರಿಯುತ್ತಿದ್ದಾಗ ದಕ್ಷಿಣ ಕನ್ನಡದಲ್ಲಿ ಸಾಮರಸ್ಯ ಯಾತ್ರೆ. ಏನು ಸೋಮರಸ ಕುಡಿದಿದ್ರಾ? ಇಂಥಾ ಅಪದ್ಧ ನಿರ್ಧಾರ ಮಾಡೊಕೆ. ಮು ಮಂ ಮಾಡಿದ ಏಕೈಕ ಒಳ್ಳೆಯ ನಿರ್ಧಾರ ರೈಗಳನ್ನು ಗೃಹಮಂತ್ರಿ ಮಾಡದೇ ಇದ್ದಿದ್ದು ಅನ್ನಿಸುತ್ತದೆ. ಮಾಜಿ ಗೃಹ ಮಂತ್ರಿಗಳು ಇದೆಲ್ಲಾ ಮಾತಾಡುವುದಿಲ್ಲ. ಅವರ್ದೇನಿದ್ದರೂ ಗ್ಯಾಂಗ್ ರೇಪ್ ಶಬ್ದದ ವ್ಯಾಖ್ಯಾನ ಅಷ್ಟೆ.

ಮಾನ್ಯ ಮಠಾಧೀಶರುಗಳೆ, ನೀವಾದರೂ ಪ್ರಶ್ನಿಸಿ. ಹರ ಮುನಿಯಲು ಗುರು ಕಾಯ್ವ, ಗುರು ಮುನಿಯಲು ಕಾವರಾರು ಅಲ್ಲವೇ? ಇದು ನನ್ನ ಅರಿಕೆ-ವಿನಯಪೂರ್ವಕ ಕೋರಿಕೆ. ನಿಮ್ಮನ್ನು ಆಡಿಕೊಳ್ಳುವ ಸ್ವಭಾವ ನನ್ನದಲ್ಲ.

No comments:

Post a Comment