Thursday, January 6, 2011

ಮಧ್ಯ ರಾತ್ರಿಯ ಕನಸುಗಳು...

ಚಾರಣಕ್ಕೆ ಹೊರಟ ನಮಗೆ ರಾತ್ರೆ ನಿದ್ದೆಯಿಲ್ಲ. ಪಕ್ಕಕ್ಕೆ ಕುಳಿತ ಹೆಂಗಸು ತಾನು ನಿದ್ದೆ ಮಾಡದೇ ತನ್ನ ಮಕ್ಕಳಿಗೂ ನಿದ್ದೆ ಮಾಡಲು ಬಿಡದೆ ಒಂದೇ ಸಮನೆ ವರಾತ ಹಚ್ಚಿಕೊಂಡಿದ್ದಳು. ಅವಳ ಗಲಾಟೆಯಿಂದ ನಮಗೂ ನಿದ್ದೆ ಬರಲ್ಲಿಲ್ಲ. ಅಂತೂ ಬಸ್ಸು ಒಂದು ಹೋಟೆಲ್ ಮುಂದೆ ನಿಂತಿತು. ಆ ಹೋಟೆಲ್ ಮುಂದೆ ಪರೋಟ ಮಾಡಲು ಕಡಪ ಕಲ್ಲಿನ ಮೇಲೆ ಒಂದು ಬುಟ್ಟಿ ಹಿಟ್ಟು ನಾದುತ್ತಿರುವ ಕರಿ ಮನುಷ್ಯ ಕಂಡ. ತದೇಕ ಚಿತ್ತ ದಿಂದ ಹಿಟ್ಟು ನಾದುತ್ತಿದ್ದ. ನಾವೆಲ್ಲಾ ಹೆಂಗಸಿಗೆ ಬಯುತ್ತ ಬಸ್ಸಿನ ಕೆಳಗೆ ಇಳಿದ್ವಿ. ರವಿ ಪರೋಟ ಮಾಡುತ್ತಿರುವವನ್ನನ್ನು ನೋಡಿ ಹಿಟ್ಟನ್ನು ನೆಲದ ಮೇಲೆ ಹಾಕಿಕೊಂಡಿದ್ದರೆ ಸುಲುಭವಾಗುತ್ತಿತ್ತು ಎಂದ. ರಾತ್ರಿ  ಊಟ ಮಾಡದೇ ಹಸಿದಿದ್ದ ಹೇರಂಬ ಒಂದು ತಟ್ಟೆ ಪರೋಟ ತಂದೇ ಬಿಟ್ಟ. ಪರೋಟ ಜೊತೆ ನಂಜಿಕೊಳ್ಳಲು ಸಾರನ್ನು ಕೊಟ್ಟಿದ್ದರು. ಸಾರಿನಲ್ಲಿದ್ದ ಎಣ್ಣೆ ನೋಡಿ ರವಿ ಎರಡೂ ಪ್ರತ್ಯೇಕವಾಗಿ ಕೊಟ್ಟಿದ್ದಾರೆ ಚೆನ್ನಾಗಿತ್ತು ಎಂದ. ಆ ಕರಿ ಮನುಷ್ಯನ ಬನಿಯನ್ ಗೂ ಹಿಟ್ಟಿನ ಬಣ್ಣಕ್ಕೂಎದ್ದು ಕಾಣುವಂತ ವ್ಯತ್ಯಾಸ ಇತ್ತು. ಅದನ್ನು ನೋಡಿ ಅರುಣ surf ನ advertise ಗೆ ಈ ಸನ್ನಿವೇಶ ಸರಿಯಾಗಿದೆ ಎಂದ. 
ಅಂತು ಬಸ್ಸು ಮತ್ತೆ ಹೊರಟಿತು. ಮತ್ತೆ ಅದೇ ಹೆಂಗಸಿನ ಗಲಾಟೆ, ನಿದ್ದೆಯಿಲ್ಲ. ಈ ಎಲ್ಲ ಹಳವಂಡಗಳ ಮದ್ಯೆ  ಪರೋಟ ಮಾಡೋನು ಕನಿಸಿನ ಹಾಗೆ ಕಂಡ.

Wednesday, November 24, 2010

बरसात और प्रेमी

आज ई बारिश तेज़

लगा जैसे तुमने दिया भेज यदोंका ताज

इसी तरह थी बरसात

जब मिलता मुझे तुम्हारा साथ

थामा था तुमने मेरा हाथ

लगा था अब बुरे दिन गए बीत

मिला जो मुझे तुम्हारा वह प्रीत

कभी तो मुझसे करो बात

या लिखो कोई ख़त

मन कर रहा है तुमसे मिलने को बहुत

दिन भी लगती है मुझे रात

तुम्हारे ही सपने हफ्ते में दिन साथ

गिनता हूँ मैं तारे छाड़कर छत

जस्ब भी टपके बूँद कोई

दीखता है तेरा चेहरा वहीं

मुझे अब कोई काम नहीं

न चैन न नींद भी

तुम्हारे ही ख्वाब मुझे सताती

कसब तुम मुझे अपना प्यार बताती

कभी तो मुझे तरसाती

ನಿರೀಕ್ಷಿತ


ಈ ಪ್ರೀತಿ ಹಿತವೆ? ಈ ನಿರೀಕ್ಷೆ ತರವೆ?
ನೀನೆಂದು ನನ್ನೆಡೆಗೆ ಬರುವೆ?
ನೀ ಬರದಿದ್ದರೆ ನಾನು ಮತ್ತೊಂದೆಡೆಗೆ ಸಾಗುವೆ.
ಮನಸು ಬೆಲ್ಲವ ಬಯಸುವ ಇರುವೆ
ನಾ ತಿಳಿದೆ ನಿನಗಿಲ್ಲ ಪ್ರೇಮ
ನನಗಿಲ್ಲ ಸುಖದ ಧಾಮ
ಬದುಕಿಲ್ಲಿ ಕಲ್ಲು, ಬಾಳಿನ್ನು ಬರಡು
ಇನ್ನೂ ನನ್ನ ಕಾಯಿಸದೆ ಹೊರಡು
ನೀನಿಲ್ಲವಾದರೆ ನಾ ಮರದ ಕೊರಡು
ನನಗಿನ್ನೂ ನಿನ್ನ ಮುಖದ ತಂಪ ಹರಡು
ನಿನ್ನ ಆ ಹಸಿರು ಸೀರೆ ಆ ಸುಂದರ ಮೋರೆ
ನನಗಿನ್ನಾದರೂ ತೋರೆ ನಾ ನಗುವೇ ಖರೆ
ಎಳೆಯದಿರು ಮನದ ಮೇಲೆ ಮತ್ತೆ ವಿರಹದ ಬರೆ
ಸುಖ ನನಗೆ ನಿನ್ನ ತೋಳ ಸೆರೆ
ಬಾಯಾರಿದ ನನಗೆ ಸಿಹಿನೀರ ತೊರೆ
ಈ ನಿನ್ನ ಪ್ರೇಮ ಧಾರೆ
ಇದಿಲ್ಲವದರೆ ಓ! ದೇವರೇ! ಹೋಳು ಮಾಡು ಈ ಧರೆ
ಕುಡಿಯಲಾರೆ ನಾನು ಸುರೆ, ಹೊರಲಾರೆ
ಭಗ್ನಪ್ರೇಮಿ ಎಂಬ ಹೊರೆ





Friday, October 8, 2010

yediurappa song

मेरी खुली खुली अन्खोंके सामने
जैसे ले गया तू mla को हड़पे
मिले जेल तुम्हे रेणुका तू भी तडपे |प|

मैंने तुझे पाला सोने में मोला
मंत्री भी बना डाला
पर मेरे पैसे के बदले में तुने
मुझे गिरा डाला

(halappa के साथ कोरस में )

आग से नाता
नारी से रिश्ता
कहे मन समझ न पाया
एक बेवफा पे हाय मुझे क्यों प्यार आया

Monday, February 15, 2010

ಗೆಳತಿ ನಿನಗೆ

ಇದು ಅರ್ಪಣೆ ನಿನಗೆ ಚೆಲ್ವಿಕೆ
ನೀರಿದು ನೀನಿತ್ತ ಕನಸಿನ ಶಾಖಕೆ
ಫೆಬ್ರವರಿ ಹದಿನಾಲ್ಕೆ ಬೇಕೇ
ನನ್ನ ಪ್ರೀತಿಯ ಹೇಳುವುದಕೆ?

ಮನಸು ಪರಿತಪಿಸುತಿದೆ ನಿನ್ನ ನೋಡಲು
ನಿನ್ನ ಕನಸಿಗೆ ನಿದ್ದೆ ಬತ್ತಲು
ಸುತ್ತಲೂ ಕಟ್ಟಲು ರತ್ರಿಯೀಗ ಹಗಲು
ನೀ ಇಲ್ಲವಾದರೆ ಇರದು ನನ್ನೀ ಒಡಲು
ಕೊಂಡೊಯ್ವರು ಮಸಣಕೆ ಸುಡಲು
ನೀನೇನು ಕಪ್ಪೇ ಬಿಳುಪೇ ತಿಳಿಯೆ
ಆದರೆ ಈ ಪ್ರೀತಿ ನಿಜಕ್ಕೂ ಸುಳಿಯೇ ?
ನಿನ್ನಂದ ಚಂದ ಎಂತಿರಲಿ ನನಗೊಪ್ಪಿಗೆ
ಈ ಶಿಕ್ಷೆ ನನ್ನ ಯಾವ ತಪ್ಪಿಗೆ?
ಸಿಗದೇ ನನಗೆ ನಿನ್ನಪ್ಪುಗೆ?
ಬೇಡ ನೋಡಲು ಜಾತಕ
ಯಾಕೆ ಸಾಕ್ಷಿಗೆ ಪಾವಕ?
ಅಕ್ಷಿಗಳಿಗೆ ನಿನ್ನ ನೋಡುವ ತವಕ
ಕಂಡರೆ ನಿನ್ನ ನನ್ನ ಹೃದಯ ಸಾರ್ಥಕ
ಗೈದಿಲ್ಲ ನಾನು ಯಾವುದೇ ಪಾತಕ
ಸಿಗದಿರೆ ನೀನು ನೆನಪಲೆ ಕಳೆಯ ಬೇಕೇ ಉಳಿದ ಬದುಕ?
ನಾನಲ್ಲ ನಿಜಕು ಕಾಮುಕ
ಆದರು ನನಗೆ ಹೊಡೆಯಿತು ಕುಸುಮ ಸಾಯಕ
ಪ್ರೀತಿಯೇ ಇನ್ನು ನನ್ನ ಕಾಯಕ
ಸಿಗದಿರೆ ನೀ ನನ್ನೊಡನೆ ಬರೆ ನಿನ್ನ ನೆನಪಿನ ಸಂದೂಕ
ಹೊತ್ತು ಕಳೆವೆ ಬದುಕ, ಮರೆವೆ ಜಗದ ಬೆಳಕ
ನಿಜಕ್ಕೂ ನಾನು ಆಸ್ತಿಕ ಈ ಪ್ರೀತಿ ಮುಗಿಯದ ಪುಸ್ತಕ
ದೆಅವ್ರೆ ಇದರ ಲೇಖಕ
ನೀ ಜೊತೆಯಿರಲು ಮತ್ತೇಕೆ ಧನಕನಕ
ಸಾವ ಭಯವಿಲ್ಲ ನನಗೆ
ನಿನ್ನೆಡೆಗೆ ಮುನಿಸಿಲ್ಲ ನನಗೆ
ಎಂದು ಬರುವೆ ನೀ ನನ್ನೆದುರಿಗೆ
ಕಾಣದೆ ಹೋಗ ಬೇಕೇ ನಾ ಬರದ ಊರಿಗೆ
ಪ್ರೀತಿಯ ಹೂವಿರದ ಬೆಂಗಾಡಿಗೆ
ಅದಕಿಂತ ಲೇಸು ಈ ಮರಣ ಮನೆಯಾಗಲಿ ಮಸಣ.





Friday, April 17, 2009

ಮಳೆ ಬಜೆಟ್ನಲ್ಲಿ sanction-disburse ಆಗೋ ಹಾಗಿದ್ದಿದ್ರೆ?

ಮಳೆ ಪ್ರಾಕೃತಿಕ ಸಂಗತಿ. ಇದು ಪ್ರತಿ ವರ್ಷವೂ ಬರುತ್ತದೆ ಸ್ವಲ್ಪ ಕಡಿಮೆ ಸ್ವಲ್ಪ ಹೆಚ್ಚು.ಪಂಚಂಗಗಳ ಪ್ರಕಾರ ಇದು ದೇವ ಮಾನವ ಕೊಳಗದಲ್ಲಿ ಅಲೆಯಯ್ಲ್ಪತ್ತು ಭೂಮಿ-ಪರ್ವತ-ಸಮುದ್ರ ಮೂರು ಕಡೆಗಳಲ್ಲಿ ಹಂಚಲ್ಪಡುತ್ತದೆ.

ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಪ್ರಕೃತಿಯ ಮೇಲೆ ಹಿಡಿತ ಸಾಧಿಸಲು ಹೊರಟಿರುವ ನಾವು ಮಳೆಯನ್ನು ಬಜೆಟ್ಟಿನಲ್ಲಿ ಹಂಚಿದಾಗ ಹೇಗಿರಬಹುದು ಎಂದು ಯೋಚಿಸಿದರೆ ಬಹುಷಃ ರೀತಿ ಆಗುತ್ತದೆ.


ಕಾಂಗ್ರೆಸ್ ಪಕ್ಷದ ಬಜೆಟ್ (P ಚಿದಂಬರಂ)

ಭಾರತ ಮೂರೂ ದಿಕ್ಕಿನಲ್ಲಿ ಸಮುದ್ರಗಳಿಂದ ಆವರಿಸಲ್ಪಟ್ಟಿದೆ ಮತ್ತೊಂದು ದಿಕ್ಕಿನಲ್ಲಿ ಹಿಮಾಲಯ ಪರ್ವತವಿದೆ ಅದರಲ್ಲಿಯೂ ಬಹಳ ನೀರು ಅಡಕವಾಗಿದೆ. ಜೊತೆಗೆ ನಮ್ಮ ದೇಶವನ್ನು ಆರ್ಥಿಕವಾಗಿ ಮುನ್ನಡೆಸ ಬೇಕಿದ್ದರೆ ಇಲ್ಲಿ ಕೈಗಾರಿಕೀಕರಣ ಆಗಲೇ ಬೇಕು. ಎಲ್ಲಿಯವರೆಗೆ ನಾವು ನಮ್ಮ ದೇಶದ ಜನರನ್ನು ಕೃಷಿಯಂತಃ ಲಾಭದಾಯಕವಲ್ಲದ ಅತಿ ಮಾನವೀಯ ಶ್ರಮವನ್ನು ಬೇಡುವ ಕೆಲಸದಲ್ಲಿ ನಿರತರನ್ನಾಗಿಸುತ್ತೇವೋ ಅಲ್ಲಿಯವರೆಗೆ ಇದು ಸಾಧ್ಯವಿಲ್ಲ. ಅಲ್ಲದೆ ಕೃಷಿಯಿಂದ ಸೃಷ್ಟಿಯಾಗುವ ಉದ್ಯೋಗಕ್ಕಿಂತ ಕ್ಯಗಾರಿಕೆಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಹೆಚ್ಚು. ವಿದೇಶೀ ನೇರ ಹೂಡಿಕೆಯನ್ನು ಹೆಚ್ಚು ಮಾಡುವುದಕ್ಕೂ ಕೂಡ ಕೈಗರಿಕೆಗಳೇ ಸಹಕಾರಿ. ಹಾಗಾಗಿ ಬಾರಿಯ ಮುಂಗಡ ಪತ್ರದಲ್ಲಿ ನಮ್ಮ ದೇಶದಲ್ಲಿ ಮೋಡಗಳನ್ನು ತಡೆ ಹಿಡಿದು ಮಳೆ ಬರಿಸಿಕೊಳ್ಳದೆ ಅವನ್ನು ವಿದೇಶಕ್ಕೆ ನೇರವಾಗಿ ರಫ್ತು ಮಾಡಿದ್ರೆ ಅವಕ್ಕೆ ಯಾವುದೇ ಸೀಮಾಸುಂಕ ಇರುವುದಿಲ್ಲ. ಹಾಗೆಯೆ ಅಂತಃ ಉದ್ಯೋಗವನ್ನು ನಡೆಸುವ ಎಲ್ಲಾ ಉದ್ಯಮಿಗಳನ್ನೂ ಭಾರತೀಯ ಆದಾಯ ತೆರಿಗೆ ಕಾಯಿದೆ ೧೯೬೧ ಅಧಿನಿಯಮ ೧೦ರ ಅನ್ವಯ ತೆರಿಗೆಯಿಂದ ವಿಮುಕ್ತರನ್ನಾಗಿಸುತ್ತೇನೆ.