Wednesday, December 13, 2017

ಟಿಪ್ಪುರಾಣ-4

ಮುಂದುವರೆದು ಸೀದನು ಹೇಳತೊಡಗಿದನು. "ಈಗಾಗಲೇ ನಾನು ಈ ಪುರಾಣದ ಪರಿಚಯವನ್ನು ಮುಗಿಸಿದ್ದೇನೆ. ಈ ಚೇತನವು ಸೃಷ್ಟಿಯ ಆದಿಭಾಗದಿಂದಲೂ ಇತ್ತು. ಈಗ ಕೃತಯುಗದಲ್ಲಿ ಈ ಚೇತನವು ಮಾಡಿದ ಒಂದೊಂದು ಸಾಧನೆಯನ್ನೂ ಹೇಳುತ್ತೇನೆ ಕೇಳಿರಿ."

"ಪರಮೇಶ್ವರನು ಕೈಲಾಸದಲ್ಲಿ ಒಂದು ದಿನ ಬೇಸರದಿಂದ ಕುಳಿತಿತಿದ್ದನು. ಆಗ ಅಲ್ಲಿಗೆ ಈ ಟಿಪ್ಪುವಿನ ಪ್ರವೇಶವಾಯಿತು. ಪರಮೇಶ್ವರನು ಬೇಸರವನ್ನು ಮುಚ್‌ಸಿದಳು ಪ್ರಯತ್ನಿಸುತ್ತಾ ಸಂಭಾಷಣೆಗೆ ಮೊದಲಾದನು."

ಮಾತಿನಲ್ಲೇ ಆತನಿಗಿದ್ದ ಬೇಸರವನ್ನು ಗ್ರಹಿಸಿದ ಟಿಪ್ಪು, "ಪರಮೇಶ್ವರನೆ, ನೀನು ಲೋಕದಲ್ಲಿ ಎಲ್ಲದಕ್ಕೂ ಒಡೆಯನಾಗಿದ್ದಿ. ನೀನು ಬೇಸರ ಪಟ್ಟುಕೊಂಡರೆ ಜಗದ ಪಾಡೇನು?. ಆದ್ದರಿಂದ ನಿನಗೆ ಬೇಸರವಾದಾಗಲೆಲ್ಲಾ ತಾಂಡವವನ್ನು ಮಾಡು" ಎಂದನು. ಅಂದಿನಿಂದ ಪರಮೇಶ್ವರನು ಬೇಸರವಾದಾಗ, ಕ್ರುದ್ಧನಾದಾಗ ಮತ್ತು ಸಂತೋಷಗೊಂಡಾಗ ಕೂಡ ತಾಂಡವವನ್ನು ಮಾಡಲು ಪ್ರಾರಂಭಿಸಿದನು. ಟಿಪ್ಪು ಆ ತಾಂಡವವನ್ನು ನೋಡಿ ಕಲಿತನು.

ಮತ್ತೊಂದು ಸಲ ಟಿಪ್ಪುವು ಕೈಲಾಸಕ್ಕೆ ಹೋಗಲಾಗಿ ಪರಮೇಶ್ವರನಿಗೆ ಏಕಾನತ್ದ ಮತ್ತು ಏಕತಾನತೆಯ ಬೇಸರ ಮೂಡಿದ್ದನ್ನು ಗ್ರಹಿಸಿ, ಭೂತಗಣಗಳ ಮನವೊಲಿಸಿ ಅವನ್ನು ಹರನ ಗಣಗಳಾಗುವಂತೆ ಮಾಡಿದನು. ದಾಕ್ಷಾಯಣಿಯ ಮದುವೆಗೆ ಸ್ವಯಂ ಟಿಪ್ಪುವೆ ಮಧ್ಯಸ್ಥಿಕೆ ವಹಿಸಿದ್ದನು.

ಹಿರಣ್ಯಕಶ್ಯಪನು "ಎಲ್ಲಿರುವನೊ ನಿನ್ನ ಹರಿ" ಎಂದು ಪ್ರಹ್ಲಾದನನ್ನು ಪ್ರಶ್ನಿಸಿದ್ದು ಬಲ್ಲೆಯಲ್ಲ. ನಂತರ ಗದೆಯಿಂದ ಕಂಬವನ್ನು ಹೊಡೆದು ಅದು ಚೂರಾಗುವುದಕ್ಕೆ ಕೂಡ ಟಿಪ್ಪುವೆ ಕಾರಣನು. ಆತನು ಆ ಗದೆಯಲ್ಲಿ ಅಡಗಿದ್ದರಿಂದಲೇ ಕಂಬವು ಮುರಿಯಿತು.

ಸಮುದ್ರ ಮಂಥನ ಮಾಡಲು ದೇವ ದಾನವರು ಮಂದರಾಚಲವನ್ನು ಕಡೆಗೋಲಾಗಿಸಿದ್ದು ಗೊತ್ತಲ್ಲ. ಅವರು ಮಂದರಾಚಲವನ್ನು ಕ್ಷೀರಸಾಗರದ ತನಕ ತರಲು ಟಿಪ್ಪುವೆ ಸಹಾಯ ಮಾಡಿದ್ದನು. ಆತನು ಮಂದರನ ಭಾರವನ್ನೆಲ್ಲಾ ತನ್ನ ಉಸಿರಿನಿಂದ ಹೀರಿಬಿಟ್ಟಿದ್ದನು. ಮಹಾವಿಷ್ಣುವು ಕೂರ್ಮನಾದ ನಂತರ ಆ ಭಾರವನ್ನೆಲ್ಲಾ ಮತ್ತೆ ಮಂದರನಲ್ಲಿ ಪ್ರತಿಷ್ಠಾಪಿಸಿದ್ದನು.

ದಕ್ಷ ಪ್ರಜಾಪತಿಯು ಸೃಷ್ಟಿಸಿದ ಮಕ್ಕಳೆಲ್ಲರನ್ನೂ ನಾರದನು ಉಪದೇಶ ನೀಡಿ ಪಾರಮಾರ್ಥಿಕರನ್ನಾಗಿಸಿ ತಪಸ್ಸಾನಾಚಿರಿಸಲು ಕಳಿಸುತ್ತಿದ್ದನು. ಆಗ, ಮಕ್ಕಳು ದೇಹದಿಂದ ಜನಿಸಿದರೆ ಅವರಿಗೆ ದೇಹಭಾವವು ಆವರಿಸಿ ಪ್ರಪಂಚೀಕರಾಗುತ್ತಾರೆ ಎಂದು ಈ ಟಿಪ್ಪುವೆ ದಕ್ಷನಿಗೆ ಉಪದೆಶವಿತ್ತನು.

ವೃತ್ರಾಸುರನ ಹತ್ಯೆಯ ಬಾಧೆಯಿಂದ ದೇವೇಂದ್ರನು ತಾವರೆಯ ದಂಟಿನಲ್ಲಿ ಅಡಗಿದ್ದನ್ನು ಬಲ್ಲಿರಲ್ಲ. ಆ ತಾವರೆಯ ದಂಟು ಟಿಪ್ಪುವೆ ಆಗಿದ್ದನು.

ದಾಕ್ಷಾಯಣಿಯು ಅಗ್ನಿಪ್ರವೇಶ ಮಾಡಲಾಗಿ, ಶಿವನು ಮತ್ತೆ ಏಕಾಂಗಿಯಾದನು. ಆಗ ಟಿಪ್ಪುವು ತಾರಕಾಸುರನಲ್ಲಿ ಹೋಗಿ ಶಿವಪುತ್ರನಿಂದ ಮರಣವನ್ನು ಕೇಳುವಂತೆ ಪ್ರೇರೇಪಿಸಿದನು. ತತ್ಪರಿಣಾಮವಾಗಿಯೇ, ಶಿವ ಪಾರ್ವತಿಯರ ವಿವಾಹ ನಡೆದದ್ದು. ಹೀಗೆ ಶಿವ ಶಕ್ತಿ ಇವರಿಬ್ಬರ ಸಮಾಗಮಕ್ಕೂ ಟಿಪ್ಪುವೆ ಕಾರಣನು.

ಇತಿ ಟಿಪ್ಪುರಾಣೆ ಆದಿ ಸರ್ಗೆ ಸಾಮರ್ಥ್ಯ ಇತಿ ಚತುರ್ಥೋಧ್ಯಾಯಃ ಸಂಪೂರ್ಣಮ್.


#ಟಿಪ್ಪುರಾಣ

No comments:

Post a Comment