Monday, December 11, 2017

ಮಾಧ್ಯಮನ್ಯಾಯ 2

ನಿನ್ನೆ ತಾನೆ ಮಾಧ್ಯಮಗಳಿಗೆ ಉಗಿದು ಗಂಟಲಿನಲ್ಲಿದ್ದ ಕಫದ ಜೊತೆ ಬಾಯಲ್ಲಿದ್ದ ಜೊಲ್ಲು ಕೂಡಾ ಖಾಲಿಯಾಗಿತ್ತು. ಈ ಮಾಧ್ಯಮದವರ ಕತೆಯೇ ಇಷ್ಟು ಉಗಿದರೆ ವರೆಸಿಕೊಂಡು ಮತ್ತೆ ಹೊಲಸಿಗೆ ಬಾಯಿ ಹಾಕುವ ಜನ ಇನ್ನಿವರ ಬಗ್ಗೆ ಬರೆಯುವುದು ಬೇಡ ಎಂಬ ನಿಲುವಿನತ್ತ ಹೊರಟಿದ್ದೆ. ಅಭ್ಯಾಸ ಎಂಬಂತೆ ಮುಖಪುಸ್ತಕದತ್ತ ಕಣ್ಣಾಡಿಸಿದೆ ಒಮ್ಮೆ. ಹೊನ್ನಾವರ ಕುಮಟಾದಲ್ಲಿ ನಡೆಯುತ್ತಿದ್ದ ಗಲಾಟೆ ಬಗ್ಗೆ ಕೆಲವು ಪೋಸ್ಟ್ ಗಳು ಬಂದಿದ್ದವು, ಎಲ್ಲವೂ ಬಿ ಟಿವಿ ಎಂಬ ಚಾನೆಲ್ಲಿನ ಹಂಚಿಕೆಯೇ ಆಗಿದ್ದವು. ಆದರೆ ಗಲಾಟೆ ಸುಮ್ಮನೇ ಆಗುವುದಿಲ್ಲ.
ಅದರ ಕಾರಣ ಯಾರೂ ಹೇಳಿಲ್ಲ. ಮತ್ತೆ ಮಾಧ್ಯಮಗಳು ಬೆಳಗೆರೆಯ ಗುಂಗಿನಿಂದೇನೂ ಹೊರಬಂದಂತೆ ಅನ್ನಿಸಲಿಲ್ಲ. ಮೊನ್ನೆ ಮೊನ್ನೆ ದಸ್ತಗಿರಿಯಾಗಿದ್ದ ದಾದಾಗಿರಿಯ ದಿನಗಳ ಹಿನ್ನೆಲೆಯ ಅಗ್ನಿ ಶ್ರೀಧರ್ ಸಂದರ್ಶನ ಹಾಕಿದ್ದರು. ಅವರು ತಮ್ಮ ಎಂದಿನ ವೈಖರಿಯಲ್ಲಿ ಮಾತಾಡಿದ್ದರು. ನಿಜವಾಗಿಯೂ ಉತ್ತಮ ವಾಗ್ಮಿ ಕೂಡಾ.

ದೃಷ್ಯ ಮಾಧ್ಯಮಗಳು ಈ ಪರಿ ಕಾಡಿದರೆ ಅಂತರ್ಜಾಲ ಮಾಧ್ಯಮಗಳು ಇನ್ನೊಂದು ಪರಿ ಕಾಡಿಬಿಟ್ಟವು. ಒಬ್ಬ ರವಿ ಬೆಳಗೆರೆಯ ಜಾತಕ ಬರೆದರೆ ಇನ್ನೊಬ್ಬ ಆತನ ಸಿನಿಮಾಗಳ ಬಗ್ಗೆ ಬರೆದಿದ್ದ. ಉಫ಼್ ಸಾಕೊ ಸಾಕು ಈ ಮಾಧ್ಯಮದ ಸಹವಾಸಕ್ಕೆ. ಆದರೆ ಕುತೂಹಲ ಕೇಳಬೇಕಲ್ಲ. ಮತ್ತೆ ಅದೇ ಮಾಧ್ಯಮದ ಸುದ್ದಿಗೆ ಹೋದೆ. ಆಗ ಕಂಡ ಬರಹ ನೋಡಿ ಸ್ವಲ್ಪ ಬೆಸರ ಸಿಟ್ಟು ಎರಡೂ ಆಗಿ ಹಾಕಿದ್ದೇ ಮಧ್ಯಾಹ್ನ ಹಾಕಿದ ಪೋಸ್ಟ್. ಮನೆಗೆ ಬಂದ ಮೇಲೆ ಸುಮ್ಮನೆ ಕೆಲಕಾಲ ಕುಳಿತು ಯೊಚಿಸಿದರೆ ಮತ್ತೆ ಯಾಕೊ ಮಾಧ್ಯಮಗಳು ಮತ್ತು ಸರಕಾರದ ಜಂಟಿ ಕಾರ್ಯಾಚರಣೆ ಈ ಬೆಳಗೆರೆ ಪ್ರಕರಣದ ಪ್ರಚಾರ ಮತ್ತು ಪರೇಶ ಅವರ ಸಾವಿನ ಹಿಂದಿನ ಕಾರಣಗಳನ್ನು ಮುಮತ್ತು ಆ ಸುದ್ದಿಯನ್ನು ಮುಚ್ಚಿಡುವುದಕ್ಕೆ ನಡೆದಿದೆ ಎನ್ನಿಸಿತು.

ರವಿ ಬೆಳಗೆರೆ ಕೊಟ್ಟ ಸುಪಾರಿ, ಸಿಗದ ಇನ್ನೊಬ್ಬ ಹಂತಕನ ಜಾಡು ಹಿಡಿದು ಹೊರಟ ಸಿ ಸಿ ಬಿ ಅಧಿಕಾರಿಗಳು ಎಲ್ಲರನ್ನೂ ತಿಳಿಯುವ ಮಾಧ್ಯಮಗಳು ಪರೇಶನ ಹತ್ಯೆಯ ಹಿಂದಿನ ಕಾರಣ ಅರಿಯಲಿಲ್ಲ ಎಂದರೆ ಚೋದ್ಯವೇ ಅಲ್ಲವೇ? ಪರೇಶನ ಮನೆಯವರನ್ನು ಸೆರೆಗೆ ಹಾಕುವ ಬುದ್ಧಿವಂತಿಕೆ ತೋರಿಸುವ ಪೋಲೀಸರು ಪರೇಶನ ಹತ್ಯೆಗೆ ಸಾಕ್ಷಿ ಹುಡುಕುವಲ್ಲಿ ಸೋತದ್ದು ಯಾಕೆ ತಿಳೀತಾ ಇಲ್ಲ. ಗೃಹ ಮಂತ್ರಿಗಳು ಪರೇಶನದ್ದು ಅನುಮಾನಾಸ್ಪದ ಸಾವೋ ಅಥವಾ ಕೊಲೆಯೋ ಇನ್ನೂ ಸ್ಪಷ್ಟವಾಗಬೇಕು ಎಂದರಂತೆ. ರವಿ ಬೆಳಗೆರೆಯ ಸುಪಾರಿ ವಿಚಾರದಲ್ಲಿ ಊರೆಲ್ಲಾ ಅಲೆದಾಡಿದ ಮಾಧ್ಯಮಗಳು ಈ ವಿಚಾರವನ್ನು ಸುಲಲಿತವಾಗಿ ಅರ್ಥ ಮಾಡಿಸಬಹುದಿತ್ತು ಸುಮ್ಮನ್ಯಾಕಿದ್ದರೋ ರಂಗನಾಥನಿಗೇ ಗೊತ್ತು. ಸಾವು ಕೊಲೆಯಲ್ಲದಿದ್ದರೆ ಅಪಘಾತ ಅಥವಾ ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿರುವ ಸಾಧ್ಯ್ತೆ ಇದೆ. ಆದರೆ ಮೂರೂ ಪ್ರಕರಣದಲ್ಲಿ ಜನನಾಂಗ ಕೊಯ್ಯುವುದು, ವೃಷಣ ಚ್ಃಎದಿಸುವುದು, ಮೈಮೇಲೆ ಇರಿದ ಗಾಯಗಳಾಗುವುದು ಸಾಧ್ಯವಿಲ್ಲ. ಮನೆಯವರನ್ನು ಸೆರೆಗೆ ಹಾಕುವ ಅವಶ್ಯಕತೆ ಇರಲೇ ಇಲ್ಲ. ಬೆಳಗೆರೆ ಪ್ರಕರಣದಲ್ಲಿ ಎಲ್ಲಾ ಸಾಧ್ಯತೆ ಅಸಾಧ್ಯತೆಗಳನ್ನು ಎತ್ತಿ ತೋರಿಸಿದ ಮಾಧ್ಯಮಗಳು ಇದನ್ನು ಆಡದೆ ಕುಮಟಾ ಹೊತ್ತಿ ಉರಿದದ್ದು, ನಿಂಬಾಳ್ಕರ್ ಕಾರಿಗೆ ಬೆಂಕಿ ಹಾಕಿದ್ದು, ಅಧೀಕ್ಷಕರ ಮೇಲೆ ಹಲ್ಲೆ ನಡೆಸಿದ್ದು ಇಷ್ಟೆ ಸುದ್ದಿ ಮಾಡಿದ್ದು ಯಾಕೆ ಗೊತ್ತಾಗಲಿಲ್ಲ.

ಅದ್ಭುತ ವಾಗ್ಮಿ, ಪ್ರಖರ ಲೇಖಕ ಉತ್ತಮ ಚಿತ್ರ ನಿರ್ದೇಶಕ, ಕತೆಗಾರ, ವಿಶ್ಲೇಶಕ, ವಿಮರ್ಶಕ ಎಲ್ಲವೂ ಅವರ ಹೆಸರಿನ ಜೊತೆ ಸೇರಿರುವ ಅಗ್ನಿಯಂತೆಯೇ ಪ್ರಖರವಾಗಿ ಮಾಡುತ್ತಾರೆ ಶ್ರೀಧರ್. ಅವರ ಕುರಿತು ಪೂರ್ಣ ಅಭಿಮಾನ ಇಟ್ಟೆ ಇದನ್ನು ಬರೆಯುತ್ತಿದ್ದೇನೆ. ಅನುಮಾನ ಇದ್ದವರು ಅವರ ಬರಹಗಳನ್ನು ಓದಬಹುದು ಇಲ್ಲದಿದ್ದರೆ ಅವರು ನಿರ್ದೇಶಿಸಿದ ಚಿತ್ರಗಳನ್ನು ನೋಡಬಹುದು. ಇವರು ರವಿ ಬೆಳಗೆರೆಯವರ ಮಿತ್ರರಂತೆ. ಒಂದೇ ವೃತ್ತಿಯಲ್ಲಿದ್ದಿದ್ದರಿಂದ ಉತ್ತಮ ಸ್ನೇಹ ಅವರ್ಲ್ಲಿ ಸಾಧ್ಯವೂ ಹೌದು. ಸಾಧುವೂ ಹೌದು. ಇಬ್ಬರೂ ಒಂದೇ ತೂಕದ ಪ್ರತಿಭೆ. ಇಂಥಾ ಶ್ರೀಧರ್ ಅವರ್ ಬಳಿ ಪರೇಶ್ ಮೇಸ್ತ ಅವರ ಸಾವಿನ ಬಗ್ಗೆ ಯಾವ ಮಾತನ್ನೂ ಮಾಧ್ಯಮ ಆಡಲಿಲ್ಲ ಯಾಕೆ?

ಉಳಿದ ಎಲ್ಲಾ ವಿಚಾರಗಳಲ್ಲಿ ಸರಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತವೆ ಮಾಧ್ಯಮಗಳು. ಗೌರಿ ಲಂಕೇಶ್ ಹತ್ಯೆಯಾದಾಗ ಸಿ ಸಿ ಟಿವಿಯ ಸಂಭಾವ್ಯ ದೃಶ್ಯಾವಳಿಗಳನ್ನು ಪುನಃಸೃಜಿಸಿ ತೋರಿಸಿದ್ದ ಈ ಮಾಧ್ಯಮಗಳು ಕರಾವಳಿ ಗಲಭೆಯ ಹಿನ್ನೆಲೆ ಬಗ್ಗೆ ಮಾತಾಡಿದ್ದು ಅತ್ಯಲ್ಪ ಎನ್ನುವುದಕ್ಕೂ ಕಡಿಮೆ ಯಾಕೆ ಹೀಗೆ?

ಪೋಲೀಸರೇನೋ ಅನಂತ ಕುಮಾರ ಹೆಗಡೆಯವರಿಗೆ ರಕ್ಷಣೆ ಅಸಾಧ್ಯ ಎನ್ನುವಂತೆ ಹೇಳಿದ್ದರಂತೆ. ಅಷ್ಟು ಬೇಗ ಗಲಭೆಯ ತೀವ್ರತೆ-ಭವಿಷ್ಯತ್ ಕಾಲವನು ಊಹಿಸಲು ಅಥವಾ ಗ್ರಹಿಸಲು ಸಾಧ್ಯವಾಗುತ್ತದೆ ಪೋಲೀಸರಿಗೆ ಅಂತಾದರೆ ಅಪರಾಧಿಗಳ ಜಾಡು ಹಿಡಿಯಲು ವಿಫಲರಾದದ್ದು ಎಲ್ಲಿ ಅಂತ ಹೊಳೆಯುತ್ತಿಲ್ಲ. ಖುದ್ದು ಮಹಾನಿರ್ದೇಶಕ ನಿಂಬಾಳ್ಕರ್ ಬಂದಿದ್ದರು ಅಂದರೆ ಗಲಭೆಯ ತೀವ್ರತೆಯ ಬಗೆಗೆ ಪೋಲೀಸರಿಗೆ ಸರಕಾರಕ್ಕೆ ಯಾವ ಮಟ್ಟದ ಮುನ್ನೆಚ್ಚರಿಕೆ ಇದ್ದಿರಬೇಕು ಊಹಿಸಿ. ನನಗೆ ನಿಮಗೆ ಲಭ್ಯವಾದ ಸ್ವಲ್ಪವೇ ವಿಚಾರಗಳಿಂದ ಇಷ್ಟು ಊಹಿಸಲು ಸಾಧ್ಯವಾಗುತ್ತದೆ ಅಂತಾದರೆ ಮಾಧ್ಯಮಗಳು ಇನ್ನೂ ಹೆಚ್ಚು ಮಾಡಬಹುದು. ಪೋಲೀಸರಿಗೇ ಆಗಲಿ ಅಥವಾ ಮಾಧ್ಯಮದವ್ರಿಗೇ ಆಗಲಿ ಗೃಹಮಂತ್ರಿಗಳಿಗೆ ಈ ವಿಚಾರಗಳ ಸಹಾಯದಿಂದ ಕೊಲೆಯೋ ಅನುಮಾನಾಸ್ಪದ ಸಾವೋ ಎಂಬ ಗೊಂದಲ ಪರಿಹರಿಸಿಕೊಡಬಹುದಿತ್ತು. ಆದರೆ ಮಾಡಿಲ್ಲ.

ಅನಂತ ಕುಮಾರ್ ಹೆಗಡೆ ರಾಷ್ಟ್ರ ರಾಜಕಾರಣದಲ್ಲಿರುವವರು. ಅವರಿಗೆ ಬೇಹುಗಾರಿಕೆ ಮಾಅಡಿಸಲು ಇವರಿಗಿಂತ ಚೆನ್ನಾಗಿ ಸಾಧ್ಯ. ಯಾಕೆಂದರೆ ಅವರು ಆ ಕ್ಷೇತ್ರದಲ್ಲಿ ೧೯೯೬ರಿಂದ ರಾಜಕೀಯದಲ್ಲಿ ಸಕ್ರಿಯರು. ಅವರೇ ಇದು ಕೊಲೆ ಎಂಬರ್ಥದ ಮಾತುಗಳನ್ನು ಹೇಗೆ ಆಡಿದರು? ಹೆಗಡೆ ಸ್ವಲ್ಪ ಔಟ್ ಸ್ಫೊಕನ್ ನಿಜ. ಆದರೆ ಈ ಪರಿ ಗಲಭೆ ಹಚ್ಚುವ ಮನಃಸ್ಥಿತಿ ಅವರದ್ದಲ್ಲ. ಆಗಿದ್ದರೆ ಉತ್ತರ ಕನ್ನಡದಲ್ಲಿ ಶಾಂತಿ ಇರುತ್ತಲೇ ಇರಲಿಲ್ಲ. ಅಘನಾಶಿನಿ-ಕಾಳಿ-ಶರಾವತಿಯರು ಸದಾ ಕೆಂಪು ಸೀರೆಯನ್ನೆ ಉಡಬೇಕಾದ ಪರಿಸ್ಥಿತಿ ಅಲ್ಲಾಗುತ್ತಿತ್ತು.

ಗೌರಿ ಲಂಕೇಶ್ ಯಾವುದೋ ಸ್ವಾಮಿಗಳ ಮೇಲೆ, ಹಿಂದೂ ಸಂಘಟನೆಗಳ ಮೇಲೆ ಅವಮಾನಕಾರಿಯಾಗಿ ಬರೆಯುತ್ತಿದ್ದರು ಅಂತ ಅವರ ಮೇಲೆ ಅನುಮಾನ ಹುಟ್ಟಿದ್ದನ್ನೇ ನಿಜವೇನೋ ಅಂತ ಭ್ರಮಿಸಲು ಒತ್ತಾಯಿಸುವಂತೆ ಸುದ್ದಿ ಪ್ರಸಾರ ಮಾಡಿದ್ದವು ಮಾಧ್ಯಮಗಳು. ಕರ್ನಾಟಕದ ಭಯೊತ್ಪಾದನೆಯ ಹಬ್ ಎಂದು ಗುರುತಿಸಬಹುದಾದ ಭಟ್ಕಳ ಹೊನ್ನಾವರದಿಂದ ಕೂಗಳತೆಯ ದೂರದಲ್ಲಿದ್ದರೂ ಇವರಿಗೆ ಅನುಮಾನ ಬರಲಿಲ್ಲ.

ನಾಪತ್ತೆಯಾದ ಲಾರಿ ಡ್ರೈವರ್ ಹೆಸರು ಕುಟುಂಬದ ವಿಚಾರ, ಊರು, ಅದು ಯಾವ ಊರಿಗೆ ಸಮೀಪದ್ದು ಎಂಬೆಲ್ಲಾ ವಿಚಾರ ಗೊತ್ತಾಯಿತು ಮಾಧ್ಯಮಗಳಿಗೆ, ಪರೇಶನ ಕುಟುಂಬದ ಹಿನ್ನೆಲೆ ಯಾಕೆ ತಿಳೀಲಿಲ್ಲ.

ನೋಟಿನಲ್ಲಿ ಚಿಪ್ಪು ಕಂಡಿತ್ತು ಮಾಧ್ಯಮಗಳಿಗೆ. ನೋಟ್ ಬ್ಯಾನ್ ಆದಾಗ ಯಾರು ಏನೇ ಆಗಿ ಸತ್ತರೂ ನೋಟ್ ಬ್ಯಾನ್ ಮಾತ್ರ ಅದಕ್ಕೆ ಕಾರಣ ಅಂತ ಲೆಕ್ಕ ಕೊಟ್ಟವು ಈ ಮಾಧ್ಯಮಗಳು. ಈ ವಿಚಾರದಲ್ಲಿ ೫ ದಿನಗಳ ದಿವ್ಯ ಮೌನ ವಹಿಸಿಬಿಟ್ಟವು. ಸದಾ ಕಾಲ ಬಡವ ಹಿಂದುಳಿದ ವರ್ಗಗಳ ಪರ ಎನ್ನುವ ಗಂಜಿ ಗಿರಾಕಿ ಪಾಷಂಡಿ ಬುದ್ಧಿಜೀವಿಗಳು ಯಾವ ದೆವ್ವದ ಕುರಿತು ತಪಸ್ಸು ಮಾಡುತ್ತಿದ್ದಾವೋ ಏನೊ? ಮಹಿಷ ದಸರಾ ಮಾಡ ಹೊರಟ ಇವರು ಈಗ ಯಾಕೆ ಬಾಯಲ್ಲಿ ಉಂಡೆ ಇಟ್ಟುಕೊಂಡು ಕುಳಿತಿದ್ದಾವೋ ಏನೋ.

ಹೇಳುವಂಥಾ ಬಿರುಕು ಇಲ್ಲದಿದ್ದರೂ, ಬ್ರಾಹ್ಮಣರು ನಿಮ್ಮನ್ನು ತುಳಿದರು ಎಂದು ಸದಾ ಹಿಂದುಳಿದವರನ್ನು ಅದೇ ಹಸರಿಂದ ಕರೆದು (ಜರೆದು) ಮಾತಾಡುವ ಸಮಾಜವಾದಿಗಳೆ, ನಾನು ಒಬ್ಬ ಬ್ರಾಹ್ಮಣ, ಸತ್ಯವನ್ನು ಪ್ರಶ್ನಿಸುವುದು ನನ್ನ ಕರ್ತವ್ಯ. ಉತ್ತರಿಸುವುದು ಪ್ರತಿಯೊಬ್ಬನ ಕರ್ತವ್ಯ. ಈಗ ಈ ಬ್ರಾಹ್ಮಣ ಹಿಂದುಳಿದ ವರ್ಗದ ಹಸುಳೆಯ ಬರ್ಬರ ಹತ್ಯೆಯ ಬಗ್ಗೆ ನಿಮ್ಮ ಮೌನ ಪ್ರಶ್ನಿಸಿದ್ದಾನೆ. ಆತ್ಮಸಾಕ್ಷಿ, ಸತ್ಯಸಂಧತೆ ಇದ್ದರೆ ಉತ್ತರಿಸಿ.

#justiceforparesh
#ನಾನುಪರೇಶ

1 comment:

  1. ಚನ್ನಾಗಿದೆ ಬರವಣಿಗೆ. ಬ್ಲಾಗಿನ ಹೆಸರಿನಲ್ಲಿ ಸೊನ್ನೆಯನ್ನು. ಬಳಸಿದ್ದೀರಿ ಅದನ್ನು ಸರಿ ಮಾಡಿದರೆ ಚನ್ನಾಗಿತ್ತು ಎಂದು ನನ್ನ ಅನಿಸಿಕೆ

    ತಂದ ತ0ದ. ಅಂದರೆ ಅ0ದರೆ

    ReplyDelete