Sunday, December 10, 2017

ಮಾಧ್ಯಮನ್ಯಾಯ

ಯಾವ ನ್ಯೂಸ್ ಚಾನೆಲ್ ಹಾಕಲಿ, ಒಂದೆ ಸುದ್ದಿ. ರವಿ ಬೆಳಗೆರೆ ದಸ್ತಗಿರಿ, ಅದಕ್ಕೆ ಕಾರಣ ಶಿಷ್ಯನನ್ನು ಕೊಲ್ಲಲು ಕೊಟ್ಟ ಸುಪಾರಿ. ಸುದ್ದಿ ಆಗಬೇಕಾದ್ದೆ. ತಪ್ಪಿಲ್ಲ. ಯಾಕೆನ್ದರೆ ರವಿ ಬೆಳಗೆರೆ ಏರಿದ ಎತ್ತರ ಅದು. ಕನ್ನಡ ಪತ್ರಿಕೆಗಳಲ್ಲಿ ಬೆರಳೆಣಿಕೆಯಷ್ಟು ದಿನಪತ್ರಿಕೆಗಳಿದ್ದ ಕಾಲ ಅದು. ರಾಜಕಾರನಿಗಳು ಹೇಳಿದ್ದಷ್ಟೆ ಸುದ್ದಿ. ಅವರು ಮಾಡಿದ್ದು ಗೊತ್ತಾಗುತ್ತಲೇ ಇರಲಿಲ್ಲ. ಇನ್ನು ಲಂಕೇಶ್ ಪತ್ರಿಕೆ  ಒಂದಿತ್ತು ನಿಜ. ಆದರೆ ರಾಜಕಾರಣಿಗಳ ಭಂಡ ಬದುಕನ್ನು ಹೀಯಾಳಿಸುವುದು ಅವರನ್ನು ಶಾರ್ಟ್ ಫ಼ಾರ್ಮ್ ಹೆಸರಿಟ್ಟು ಕರೆಯುವುದು, ಎಲ್ಲದಕ್ಕೂ ಬ್ರಾಹ್ಮನರನ್ನು ತೆಗೆಳುವುದು ಇಷ್ಟೆ ಆಗಿತ್ತು ಆ ಪತ್ರಿಕೆ.

ಈ ಕಡೆ ಬಂದ ಹಾಯ್ ಬೆಂಗಳೂರ್! ಒಂದು ವೈಶಿಷ್ಟ್ಯ ಹೊಂದಿತ್ತು.ರಾಜಕಾರಣಿಗಳು-ಅಧಿಕರಿಗಳ ಭಂಡತನವನ್ನು ಹೊರ ಹಾಕುತ್ತಲೆ ಇನ್ನಷ್ಟು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದರು ರವಿ. ಖಾಸ್ ಬಾತ್, ಬಾಟಮ್ ಐಟಮ್, ಹಲೊ, ಸಾಫ಼್ಟ್ ಕಾರ್ನರ್, ಲವ್-ಲವಿಕೆ ಹೀಗೆ ಅನೇಕ ಉತ್ತಮ ಅಂಕಣಗಳು ಬರುತ್ತಿದ್ದವು ಅದರಲ್ಲಿ. ಓದುಗರನ್ನು ಸೆಳೆಯಲು ರವಿ ಬೆಳಗೆರೆ ಉಪಯೊಗಿಸಿದ್ದ ಭಾಷೆ ಉತ್ತಮವಲ್ಲದಿದ್ದರೂ ಆಕರ್ಷಣೀಯವಾಗಿತ್ತು. ಕನ್ನಡ ಪತ್ರಿಕಾ ರಂಗದಲ್ಲಿ ಅವರೊಬ್ಬ ನಿಜಕ್ಕೂ ಕಸುಬುದಾರ ಅಂದರೆ ಸುಳ್ಳಾಗಲಾರದು.

ಹುಕಿ, ಹ್ಯಾಂವ ಇತ್ಯಾದಿ ಹೊಸ ಶಬ್ದಗಳ ಪ್ರಯೋಗ ಶುರು ಮಾಡಿದ್ದು ಕೂಡಾ ರವಿ. ಆದರೆ ಈ ರವಿ, ಕೊನೆಗೆ ಅವರದ್ದೆ ಭಾಷೆಯಲ್ಲಿ ಹೇಳುವುದಾದರೆ ಸರಕು ಖಾಲಿ ಮಾಡಿಕೊಂಡು ಬಿಟ್ಟಿದ್ದರು. ದುಡ್ಡಿನ ಗರ್ವವಾ ಅಥವಾ ಪ್ರಸಿದ್ಧಿಯ ಮದವೊ ಗೊತ್ತಿಲ್ಲ. ರವಿ ತಮ್ಮದೆ ಕಾರ್ಯಕ್ಷೆತ್ರವಾದ ಮಾಧ್ಯಮದವರ ಮೇಲೆ ಹೇಸಿಗೆಯಾಗುವಷ್ಟು ಬರೆದರು. ಮಾಟಗಾತಿ, ಸರ್ಪ ಸಂಬಂಧ, ರೇಶ್ಮೆ ರುಮಾಲು ಇ೦ಥಾ ಅದ್ಭುತ ಕೃತಿಗಳ ಲೇಖಕ ವಯಕ್ತಿಕ ದ್ವೇಶ ಕಾರತೊಡಗಿದ್ದ ಪತ್ರಿಕೆಯಲ್ಲಿ. ಇಷ್ಟೆ ಅಲ್ಲ. ವಾರಗಟ್ಟಲೆ ಹಟಕ್ಕೆ ಬಿದ್ದು ಬೈದವರನ್ನು ಅಣ್ಣ, ಅಕ್ಕ, ಗೆಳೆಯ, ತಮ್ಮ, ತಮ್ಮನಂಥ ಮಿತ್ರ ಎಂದೆಲ್ಲಾ ಬರೆಯುತ್ತಿದ್ದರು.

ವಿಜಯ ಸಂಕೇಶ್ವರ ಅವರನ್ನು ಹಿಗ್ಗಾ ಮುಗ್ಗಾ ಬೈದಾತ, ಕೊನೆಗೆ ಅವರಿಗೇ ಮುಜುಗರವಾಗುವಂತೆ ಹೊಗಳಿದ್ದ. ಪ್ರಕಾಶ್ ರೈ ಅವರನ್ನು ಹೆಣ್ಣು ಬಾಕ ಎಂದು ಕರೆದು ಗೆಳೆಯ ಅಂದಿದ್ದ. ಗೆಳೆಯ ಅಂದಿದ್ದ ವಿಶ್ವೇಶ್ವರ ಭಟ್ಟರ ಮೇಲೆ ಯಾವ ಜನ್ಮದ ದ್ವೇಷವೊ ಎಂಬಂತೆ ಬೆನ್ನು ಬಿದ್ದಿದ್ದ.

ಒಂದು ಸಾರಿ ಚಿತ್ರದುರ್ಗದಲ್ಲೆಲ್ಲೋ ಗುಂಡು ಹಾರಿಸಿ ಅದನ್ನೇ ಸುದ್ದಿಯಾಗಿಸಿದ್ದ. ಹಂತಕನ ಕಾಲಿಗೆ ನಾನೇ ಗುಂಡು ಹಾರಿಸಿದೆ ಅಂತ. ಆಗ ಇವನನ್ನು ತನ್ನ ಪತ್ರಿಕೆಯಲ್ಲಿ ಬೈದ ಗೌರಿಯನ್ನು ಕೊನೆಗೆ ಈತ ಗೆಳತಿ ಅಂತ ಕರೆದಿದ್ದ. ತನ್ನ ಹೆಂಡತಿ, ಮಕ್ಕಳು, ಅವರ ಕಾರು, ಬಟ್ಟೆ
ಅಭ್ಯಾಸಗಳು ಎಲ್ಲಾ ಪತ್ರಿಕೆಯಲ್ಲಿ ಬರತೊಡಗಿದ್ದವು. ಸಮಾಜದ ಸುಧಾರಣೆಯ ಏಕಮಾತ್ರ ಹೊಣೆಗಾರ ಎಂಬಂತೆ ತನ್ನನ್ನು ಬಿಂಬಿಸಿಕೊಂಡಿದ್ದ ಇವರ ಬರಹಗಳಲ್ಲಿ ಇವರ ಹೆಂಡ ಕುಡಿಯುವ ಚಟ, ಸಿಗರೇಟಿನ ಹವ್ಯಾಸ ಸಮಾಜ ಕಂಟಕವಾಗಿದ್ದರೂ ಅದನ್ನೆ ವೈಭವೀಕರಿಸುತ್ತಿದ್ದ. ಯಾಕೆ ಹೀಗೆ ಈತ. ತನ್ನ ಬಗ್ಗೆ ಇನ್ನೂ ಎಷ್ಟೆಲ್ಲ ಹೇಳಿಕೊಳ್ಳಬಹುದಲ್ಲ ಎಂದು ಅನ್ನಿಸಿದ್ದು ನಿಜ ನಮಗೆ.

ಆದರೆ, ಕಾರಣ ಏನೇ ಇರಲಿ. ಸುಪಾರಿ ಕೊಟ್ಟಿದ್ದು ತಪ್ಪು.

ಇಷ್ಟು ಸಾಕಿತ್ತು ಈ ಬರಹಕ್ಕೆ. ಆದರೆ ಮುಂದುವರಿಸಲೇ ಬೇಕಾದ ಅನಿವಾರ್ಯತೆ ಇದೆ ನನಗೆ.

ರವಿ ಬೆಳಗೆರೆ ದಸ್ತಗಿರಿ ಅನೇಕ ರೀತಿಯ ಅನುಮಾನಗಳನ್ನು ಹುಟ್ಟಿಸುತ್ತದೆ. ಎಲ್ಲರನ್ನೂ ಹೆದರಿಸಿಕೊಂಡಿದ್ದವ ಎಲ್ಲಾ ರೀತಿಯ ಅಪರಾಧಗಳ ಬಗ್ಗೆ ಬಹಳ ಆಳವಾಗಿ ತಿಳಿದಿದ್ದವ ಅಗ್ನಿ ಶ್ರೀಧರ್ ದಸ್ತಗಿರಿಯಾದಾಗ ವಿಡಿಯೊ ಮಾಡಿ ಬಿಟ್ಟವ ಪೋಲೀಸರ ಕೈಗೆ ಹೆಗೆ ಸಿಕ್ಕಿ ಬಿದ್ದ? ಇದು ಆ ಎಲ್ಲಾ ಅನುಮಾನಗಳ ತಾತ್ಪರ್ಯ.

ಗಮ್ಮತ್ತು ಇರುವುದೆ ಇಲ್ಲಿ.

ಸ್ವಲ್ಪ ಹಿಂದಿನ ಘಟನೆಗಳನ್ನು ನೋಡೊಣ. ಗೌರಿ ಲಂಕೆಶ್ ಕೊಲೆಯಾದರು. ಪ್ರತಿಭಟನೆ ನಡೆಯಿತು. ಬುದ್ಧಿಜೀವಿಗಳ ಒತ್ತಾಯಕ್ಕೆ ಮಣಿದ ಸರಕಾರ ಎಸ್ ಐ ಟಿ ರಚನೆ ಮಾಡಿತು. ತನಿಖೆ ಮುನ್ದುವರೆಯುತ್ತಲೇ ಇತ್ತು. ನಡುವೆ ಗಣಪತಿಯವರ ಕೇಸ್ ಮತ್ತೆ ಒಪನ್ ಆಯಿತು. ಸುದ್ದಿ ಬಂತು. ಅವರು ಮರಣ ಹೊಂದಿದ ಕೋಣೆಯಲ್ಲಿ ಗುಂಡು ಸಿಕ್ಕಿತು ಅಂತ. ಜನ ಮೊದಲೇ ಸಿ ಓ ಡಿ ಬಗ್ಗೆ ತಿಳಿದಿದ್ದರು. ಹಾಗಾಗಿ ಈ ಸುದ್ದಿ ಉಪಯೊಗಕ್ಕೆ ಬರಲಿಲ್ಲ. ಗೌರಿ ಲಂಕೇಶ್ ಹತ್ಯೆ ಜನ ಮರೆಯುತ್ತಿದ್ದರೋ ಏನೋ, ಬುದ್ಧಿಜೀವಿಗಳು ಅರಚಾಡಿ ಕೂಗಾಡಿ ನೆನಪಿರುವ ಹಾಗೆ ಮಾಡಿಬಿಟ್ಟರು. ಇಷ್ಟರ ಮಧ್ಯೆ ಬೆಂಗಳೂರು ಮಳೆಗೆ ರಸ್ತೆ ಗುಂಡಿಗಳಿಗೆ ಜನ ಬಲಿಯಾದರು. ಸರಕಾರವನ್ನು ಥೂ ಛೀ ಎಂದೆಲ್ಲಾ ಬಯ್ಯತೊಡಗಿದರು. ನಾನೂ ಸೇರಿ ಎಷ್ಟೊ ಜನ ಬುದ್ಧಿಜೀವಿಗಳನ್ನ ಕೇಳಿಯೂ ಆಯಿತು. ಯಾವಾಗಿನಂತೆ ಬಿಟ್ಟೂ ಆಯಿತು.

ಮೊನ್ನೆ ಮೊನ್ನೆ, ಹೊನ್ನಾವರ ಹೊತ್ತಿ ಉರಿಯಿತು. ಪರೇಶ್ ಮೇಸ್ತ ಎನ್ನುವ ಹುಡುಗ ಕಾಣೆಯಾದ ಎಂದಷ್ಟೆ ಸುದ್ದಿ ಇತ್ತು ಎಲ್ಲಾ ಕಡೆ. ಶುಕ್ರವಾರ ಮಧ್ಯಾಹ್ನ ಅನ್ನುವ ಹೊತ್ತಿಗೆ ಆತನ ಶವ ಸಿಕ್ಕ ಸುದ್ದಿ ಬಿತ್ತರವಾಯಿತು. ಸ್ವಲ್ಪ್ವೇ ಹೊತ್ತು ಕಳೆದು ರವಿ ಬೆಳಗೆರೆ ದಸ್ತಗಿರಿಯಾದ ಸುದ್ದಿ. ಬಹಳ ಜನ ಹೊನ್ನಾವರದ ಘಟನೆಯಿಂದ ತಮ್ಮ ಗಮನ ಈ ಕಡೆ ಹರಿಸಿದರು.

ಮಾಧ್ಯಮಗಳೂ ಅಷ್ಟೆ. ರವಿಯವರ ಜನ್ಮ ಜಾಲಾಡಲು ಹೊರಟುಬಿಟ್ಟವು. ಒಂದು ಕಡೆ ಅವರ ಮಗಳನ್ನು ಮಾತಾಡಿಸಿದರು, ಸಿಬ್ಬಂದಿ ಜೊತೆ ಮಾತಾಡಿದರು, ಯಾವಗಲೂ ಮಾಡುವಂತೆ ಸುದ್ದಿ ದೊಡ್ಡ ಮಾಡಲು ಎಲ್ಲಾ ಮಾಡಿದರು. ಪರೇಶನನ್ನು ಮರೆತೆ ಬಿಟ್ಟರು. ಹಾಗಂತ ಸಿನಿಮಾ ಸುದ್ದಿ ನಿಲ್ಲಲಿಲ್ಲ. ಮಾಧ್ಯಮಗಳು ಟಿ ಆರ್ ಪಿ ಗಾಗಿಯೇ ಇದನ್ನೆಲ್ಲ ಮಾಡುವಷ್ಟು ದಡ್ಡರಲ್ಲ. ಬಹುಶಃ ದೊಡ್ದ ಮೊತ್ತ ಸಂದಾಯವಾಗಿದೆ.

ಇಷ್ಟರಲ್ಲಿ ಫೆಸ್ ಬುಕ್ಕಿನಲ್ಲಿ ಪರೆಶನ ಮೃತ ದೇಹದ ಚಿತ್ರ ಬಂತು. ಆಗ ನನಗನ್ನಿಸಿತು ಹೊನ್ನಾವರದಲ್ಲಿ ನಡೆದ ಹತ್ಯೆಯಿಂದ ಜನರನ್ನು ವಿಮುಖವಾಗಿಸಲು ಇಷ್ಟೆಲ್ಲಾ ಮಾಡಿದರು ಅಂತ. ಸುಡುಗಾಡು ಯೋಚನೆಗಳು ಸುಮ್ಮನಿರಲಿಲ್ಲ ಒಂದಕ್ಕೊಂದು ತಳುಕು ಹಾಕಿಕೊಂಡು ಬಂದವು.

ರವಿ ಬೆಳಗೆರೆ ೨೦೦೦ ಕಾಲ್ ಮಾಡಿದ್ದಾರೆ ಸುಪಾರಿ ಕಿಲ್ಲರ್ ಗಳಿಗೆ. ಅಲ್ಲಿ ತನಕ ಬೇಹುಗಾರಿಕೆ ಇಲಾಖೆ ಏನು ಮಾಡುತ್ತಿತ್ತು. ಹೋಗಲಿ ದೊಡ್ಡ ಜನ ಅಂತ ಬಿಟ್ಟರೋ ಏನೊ. ಆದರೆ ಭಟ್ಕಳದಿಂದ ಸ್ವಲ್ಪವೇ ದೂರದಲ್ಲಿರುವ ಹೊನ್ನಾವರದಲ್ಲಿ ನಡೆಯಬಹುದಾಗಿದ್ದ ಕೋಮು ಗಲಭೆ ವಿಚಾರವಾಗಿಯೂ ತಿಳಿಯಲಿಲ್ಲವೇ? ಯಾಕೆ ಸತ್ತರೆ ಬಡ ಹಿಂದುಗಳು ಅಂತಲಾ?

ರವಿ ಬೆಳಗೆರೆಯ ಎರಡನೇ ಹೆಂಡತಿ ಮನೆ ಬಿಟ್ಟು ಹೋಗಿದ್ದು ಹುಡುಕಿದವು ಮಾಧ್ಯಮಗಳು. ಈ ಹಿಂದೆ ಮಂಗಳೂರು ಪಬ್ ಗಲಾಟೆಯನ್ನು ಲೈವ್ ಮಾಡಿದ್ದವು ಈ ಮಾಧ್ಯಮಗಳು. ಪರೇಶ ಏಕೆ ಬೇಡವಾದ. ಹಾಳಾಗಿ ಹೊಗ್ಲಿ ಅಂತ ಬೊಬ್ಬೆ ಹೊಡೆಯೊ ಪಬ್ಲಿಕ್ ಟಿ ವಿ ರಂಗಣ್ಣ ಎಲ್ಲಿ ಹೋದ್ರು. ಇದು ಪತ್ರಿಕಾ ಧರ್ಮವಾ?

ಬಿ ಸಿ ರೋಡ್ ಗಲಾಟೆಯಲ್ಲಿ ಖುದ್ದು ಮುತುವರ್ಜಿ ವಹಿಸಿದ್ದ ರಮಾನಾಥ ರೈ ಗಂಟಲಿನಲ್ಲಿ ಈಗ ಮೀನಿನ ಮುಳ್ಳು ಸಿಲುಕಿ ಕೊಂಡಿತಾ ಹಾಗಾದರೆ?

ಯಾರು ಮಾತಾಡಿದರೂ "ಅಲ್ಲ ಸರ್? ಅದು ಎಂಗೆ ಸರ್" ಎಂದು ಮಧೆ ಮಧ್ಯೆ ಬಾಯಿ ಹಾಕಿ ಬೊಬ್ಬಿರಿಯುವ ರಾಧಾ ಈರೇಗೌಡ ಬಾಯಿ ಮುಚ್ಚಿದ್ದು ಯಾಕೆ? ಎಷ್ಟು ಕಪ್ಪ ಸಂದಿತೋ ಏನೋ. (ಇವಳ ಕನ್ನಡ ಹೇಗಿದೆ ಎಂದರೆ, ಇವಳು ಹಿರೆಗೌಡರ ಹೆಂಡತಿಯೋ ಅಥವಾ ಈರೆಗೌಡರ ಹೆಂಡತಿಯೊ ಅಂತ ಅನುಮಾನ ಇದೆ)

ನಾವು ಸುಳ್ಳು ಹೇಳಲ್ಲ ಅಂದ ಶಹಿಧರ ಭಟ್ಟರೆ, ನೀವು ಫೆಸ್ ಬುಕ್ಕಿನಲ್ಲಿ ತುಂಬಾ ಚಟುವಟಿಕೆಯಿಂದ ಇರುತ್ತೀರಿ. ಕಡೆ ಪಕ್ಷ ಅಲ್ಲಾದರೂ ಈ ಬಗ್ಗೆ ಹೇಳಬಹುದಿತ್ತು. ಇನ್ನಾದರೂ ಕವಳ ಉಗಿದು ಬಾಯಿ ತೊಳೆದು ಬಂದು ಪರೇಶನ ಹತ್ಯೆಗೆ ನ್ಯಾಯ ಕೇಳಿ.

ಬುದ್ಧಿ ಜೀವಿಗಳು ಬಿಡಿ. ಅಮಾಯಕರು ಸತ್ತಾಗಲೆಲ್ಲಾ ಅವರ್ದ್ದು ಮೂಲವ್ಯಾಧಿಯ ಮೌನ. ಹದಿವಯಸ್ಸಿನ ಆ ಹುಡುಗನಿಗೆ ಗಲಾಟೆ ಮಾಡಲಾದರೂ ಮನಸ್ಸು ಬರಲು ಸಾಧ್ಯವಾ? ಎಷ್ಟು ಕನಸಿತ್ತೊ ಏನೊ. ಹೆರ್ ಸ್ಟೈಲ್, ಬಟ್ಟೆ ಬೂಟು ಮೊಬೈಲು ಗಳ ಕಡೆ ಯೋಚಿಸುವ ವಯಸ್ಸು ಅದು. ಮುಂದೆ ಮಾಡಬೇಕಾದ ಸಾಧನೆಯ ಕನಸ್ಸು ಕಾಣಬೆಕಾದ ಪ್ರಾಯ ಅದು. ಆ ವಯಸ್ಸಿನಲ್ಲಿ ಅಂಥಾ ಬರ್ಬರವಾಗಿ ಅವನನ್ನು ಕೊಂದದ್ದಕ್ಕೆ ನಿಮಗೆ ಏಕೆ ಏನೂ ಅನ್ನಿಸ್ತಿಲ್ಲ ಮಾಧ್ಯಮಗಳೆ? ಪ್ರತಾಪ್ ಸಿಂಹ ಬ್ಯಾರಿಕೇಡ್ ಗುದ್ದಿದ್ದಕ್ಕೆ ಬೊಬ್ಬಿರಿದ ಮು ಮಂ ಬಿಡಿ ಭಾಗ್ಯವಿಧಾತರಾಗುವುದಷ್ಟೆ ತಮ್ಮ ಸಾರ್ಥಕ್ಯ ಅಂದುಕೋಂಡಿದ್ದಾವೆ. ಇಂಥಾ ಸಂಸದ ಬೇಕಾ ಅಂದ ಮಾಧ್ಯಮಗಳು ಆ ಹಸುಳೆಯ ಸಾವನ್ನು ಕಡೆಗಣಿಸುತ್ತಿದ್ದಾವಲ್ಲಾ, ಇಚು ನಮಗೆ ಬೇಕಾ?

ಚಕ್ರವ್ಯೂಹದಲ್ಲಿ ಅಭಿಅನ್ಯುವನ್ನು ಕೊಂದಾಗ ದೇವತೆಗಳು ಕೌರವನಿಗೆ ಸುಡು ಸುಡು ನಿನ್ನಯ ವಿಕ್ರಮ ಎಂದರಂತೆ. ಈ ಮಾಧಯಮಗಳ ವಿಕ್ರಮಕ್ಕೂ ಹಾಗೆ ಸುಡು ಸುಡು ಎನ್ನುವುದೇ ಸರಿ. ಎದೆಯ ಉರಿ ಸುದದೆ ಇದ್ದೀತೆ?
ಉದ್ದದ ಬರಹಕ್ಕೆ ಕ್ಷಮೆ ಇರಲಿ. ಸುಪಾರಿ ಕೊಟ್ಟವನ ಸೆರೆಗಿಂತ ಮುಗ್ಧ ಜೀವ ಕಡೆಯಾಯಿತಲ್ಲ ಎನ್ನುವ ಸಂಕಟ ತಡೆಯದೇ ಪೂರ್ತಿ ಬರೆದೆ.

ಪರೇಶನ ಆತ್ಮಕ್ಕೆ ಶಾಂತಿ ಸಿಗಲಿ. ಮಾಧ್ಯಮಗಳ ಪಕ್ಶಪಾತ ಧೋರಣೆಗೆ.... (ನನ್ನಲ್ಲಿ ಶಬ್ದಗಳಿವೆ. ಬರೆಯುವುದು ಸಭ್ಯತೆ ಅಲ್ಲ ಅಂತ ಬರೆದಿಲ್ಲ.)

#justiceforparesh
#ನಾನುಪರೇಶ

No comments:

Post a Comment