Friday, December 2, 2022

ವರದಾಮೂಲ ಮಹಾಭಾರತದಲ್ಲಿ

ಇನ್ನೂ ಹೆಮ್ಮೆಯ ಸಂಗತಿ ಎಂದರೆ ಗಾಯತ್ರೀ ಕ್ಷೇತ್ರವಾಗಿರುವ ವರದಾಮೂಲ, ಗಾಯತ್ರೀ ಕ್ಷೇತ್ರ ಎಂದೇ ಮಹಾಭಾರತದಲ್ಲಿ ಉಲ್ಲೇಖವಾಗಿರುವುದು.

ಪುಲಸ್ತ್ಯ ಮಹರ್ಷಿಯು ಭೀಷ್ಮನಿಗೆ ತೀರ್ಥಯಾತ್ರೆಯ ಕುರಿತಾಗಿ ಹೇಳಿದ್ದನ್ನು ನಾರದ ಮಹರ್ಷಿಗಳು ಧರ್ಮರಾಯನಿಗೆ ಹೇಳುತ್ತಾರೆ.

ಹೀಗೆ ಹೇಳುವಾಗ ಪಾಂಡ್ಯ ದೇಶದ ಬಗೆಗೆ ತಿಳಿಸುತ್ತಾರೆ.(ಇಂದಿನ ತಮಿಳುನಾಡು). ಪಾಂಡ್ಯ ದೇಶದ ಋಷಭ ಪರ್ವತದ ಬಗೆಗೆ ತಿಳಿಸಿ, ನಂತರ ಕನ್ಯಾತೀರ್ಥ( ಕನ್ಯಾಕುಮಾರಿ) ಕುರಿತಾಗಿ ತಿಳಿಸಿ ನಂತರ ಗೋಕರ್ಣ ಕ್ಷೇತ್ರದ ಬಗೆಗೆ ತಿಳಿಸುತ್ತಾರೆ. ಗೋಕರ್ಣ ಕ್ಷೇತ್ರದ ನಂತರ ವೇಣಾ ನದಿಯ ಬಗೆಗೆ ತಿಳಿಸಿ ನಂತರ ಗೋದಾವರೀ ಕ್ಷೇತ್ರದ ಬಗೆಗೆ ತಿಳಿಸುತ್ತಾರೆ.
ಗೋದಾವರೀ ಕ್ಷೇತ್ರ ಇಂದಿನ ಆಂಧ್ರದಲ್ಲಿದೆ. ವೇಣಾ ನದಿ ಕ್ಷೇತ್ರ ಇಂದಿನ ಮಹಾಬಳೇಶ್ವರ.( ಸಜ್ಜನಗಡದ ಸಮೀಪ.)
ಭೌಗೋಳಿಕವಾಗಿ ನೋಡಿದಾಗ ಇಲ್ಲಿ ಒಂದು ರೀತಿಯ ವೃತ್ತ ಪ್ರಕಾರದಲ್ಲಿ ಕ್ಷೇತ್ರಗಳ ವರ್ಣನೆ ಇದೆ. ಗೋಕರ್ಣ ಮತ್ತು ಮಹಾಬಳೇಶ್ವರ ನಡುವೆ ಇರುವ ಗಾಯತ್ರೀ ಕ್ಷೇತ್ರ ಎಂದರೆ ಅದು ವರದಾಮೂಲವೆ ಸರಿ. ಇದಕ್ಕೆ ಇಂಬಾಗಿ ವರದಾನದಿಯ ವರ್ಣನೆ ಮತ್ತು ವರದಾ ಮತ್ತು ವೇಣಾ (ಕೃಷ್ಣವೇಣಾ) ಸಂಗಮದ ಬಗೆಗೆ ಮಾಹಿತಿ ಇದೆ. ಮಹಾಬಲೇಶ್ವರದಲ್ಲಿಯೇ ಗಾಯತ್ರೀ ನದಿ ಜನಿಸಿದರೂ, ಇಲ್ಲಿ ಹೆಸರಿಸಿರುವುದು ವರದಾನದಿ. ಹಾಗಾಗಿ ಇಂದಿನ ವರದಾಮೂಲವೇ ಗಾಯತ್ರೀ ಕ್ಷೇತ್ರ. (ಗಾಯತ್ರಿ ನದಿ ಮಹಾಬಲೇಶ್ವರ ಆರಭ್ಯದಿಂದಲೂ ಗುಪ್ತಗಾಮಿನಿ ಹಾಗಾಗಿ ಸಂಗಮ ಕ್ಷೇತ್ರದ ಪ್ರಶ್ನೆ ಅಪ್ರಸ್ತುತ). ಇದು ನನ್ನ ಹೆಡ್ಡ ತಲೆಗೆ ಬಂದ ವಿಶ್ಲೇಷಣೆ. ತಳಿದವರು ಚೆನ್ನಾಗಿ ವಿವರಿಸಿ. ತಪ್ಪಿದ್ದರೆ ತಿದ್ದಿಕೊಳ್ಳಲು ಸಹಾಯ ಮಾಡಿ.

Sunday, October 16, 2022

ವರಾಹಾವತಾರ:ಒಂದು ಬೌದ್ಧ ಅಧ್ಯಯನ

 ಬ್ರಾಗಳೆಲ್ಲ ಸೇರಿ ಯಜ್ಞ ಯಾಗ ಮಾಡಿ ಹೊಲಸು ಮಾಡುತ್ತಿದ್ದರು. ಆಗ  ಹೊಲಸು ತೆಗೆಯುವುದಕ್ಕೆ ಮತ್ತು ಬ್ರಾಗಳು ಯಜ್ಞ ಮಾಡುವುದಕ್ಕೆ ಬೇಕಾದ ಮೂಲಿಕೆಗಳನ್ನು ತರಲು ಕಾಡಿಗೆ ಹೋಗದಂತೆ ಮಾಡಲು ಬುದ್ಧನ ಶಿಷ್ಯರಾದ ಕೆಲವು ವಿಜ್ಞಾನಿಗಳು ಜೀನ್ ಮಾಡಿಫಿಕೇಷನ್ ಮುಖಾಂತರ ವರಾಹವನ್ನು ಸೃಷ್ಟಿಸಿದರು. 
ಮೊದಲು ಸೃಷ್ಟಿಸಿದ ವರಾಹ ಕೊರೆ ದಾಡೆಗಳಿಲ್ಲದೆ ಕೇವಲ ಹೊಲಸನ್ನು ತಿನ್ನುತ್ತಿತ್ತು. ಇನ್ನೊಂದು ವರಾಹ ಕೊರೆ ದಾಡೆಗಳನ್ನು ಹೊಂದಿ ಕಾಡನ್ನು ಕಾಯುತ್ತಾ ಗೆಡ್ಡೆ ತಿಂದು ಯಜ್ಞಕ್ಕೆ ತೊಂದರೆ ಮಾಡುತ್ತಿತ್ತು. 
ಕನಕಾಕ್ಷನೆಂಬ ಒಬ್ಬ ಮೂಲನಿವಾಸಿ ಬೌದ್ಧನಿಗೆ ವೈದಿಕರು ಮೋಸದಿಂದ ಸೋಮರಸ ಎನ್ನುವ ಹೆಂಡವನ್ನು ಕುಡಿಸಿ ಮತ್ತನನ್ನಾಗಿ ಮಾಡಿದರು. 
ಆತ ಅಮಲಿನಲ್ಲಿ ಕಾಡಿನಲ್ಲಿ ತಿರುಗುತ್ತಿದ್ದಾಗ ವರಾಹವೊಂದು ಕಿತ್ತಿದ್ದ ಸುವರ್ಣ ಗೆಡ್ಡೆಯನ್ನು ಹಿಡಿದುಕೊಂಡು ಓಡತೊಡಗಿದ. ಸಿಟ್ಟಿಗೆದ್ದ ವರಾಹ ಅವನನ್ನು ದಾಡೆಯಿಂದ ಸಿಗಿದು ಕೊಂಡಿತು.
ಇದೇ ವೈದಿಕರು ಹೇಳುವ ಪುರಾಣದ ಹಿರಣ್ಯಾಕ್ಷನ ಕತೆ. ಆ ಸುವರ್ಣಗಡ್ಡೆಯೇ ವೈದಿಕರ ಭೂದೇವಿ.
ಕಾಲಾಂತರದಲ್ಲಿ ವರಾಹದ ಭಯದಿಂದ ಅದಕ್ಕೆ ವೈದಿಕರೇ ಆಹಾರವನ್ನು ಕೊಡತೊಡಗಿದರು. ಇದರ ಬಗ್ಗೆ ಅವರಲ್ಲಿಯೇ ಭಿನ್ನಾಭಿಪ್ರಾಯ ಬಂದು ವರಾಹವನ್ನು ಅವತಾರ ದೇವರು ಎಂದೆಲ್ಲ ಅಂದರು. 
ಹೀಗೆ ಬೌದ್ಧರ ವೈಜ್ಞಾನಿಕ ಸೃಷ್ಟಿಯನ್ನು ಹೈಜಾಕ್ ಮಾಡಿ ಮೂಲ ನಿವಾಸಿ ಜನರನ್ನು ಶೋಷಿಸಲು ಪುರಾಣವನ್ನು ಸೃಷ್ಟಿಸಿ ಅವತಾರವನ್ನು ಆರೋಪಿಸಲಾಯಿತು. ಮೂಲ ನಿವಾಸಿ ಬೌದ್ಧ ದೊರೆ ಕನಕಾಕ್ಷನೇ ಮುಂದೆ ಹಿರಣ್ಯಾಕ್ಷನೆಂಬ ದೈತ್ಯನೆಂದೂ ಆತ ದುಷ್ಟನೆಂದೂ ಅಪ ಪ್ರಚಾರ ಮಾಡಿದರು ಆರ್ಯ ವೈದಿಕ ಬ್ರಾಗಳು.
...
.
.
....
.
.
.
.
.
.
.
.
.
.
.

..
.
.
.
.
.
.
.

ಮೇಲೆ ಹೇಳಿದ್ದೆಲ್ಲ ಶುದ್ಧ ಸುಳ್ಳು.
ನವಬೌದ್ಧರು ಈ ರೀತಿ ಹೇಳುತ್ತಾರೆ ಅಂತ ತೋರಿಸಿದ್ದು ಅಷ್ಟೇ.😀🙏

Friday, June 17, 2022

ಬ್ರಾಹ್ಮಣ ದ್ವೇಷಿಗಳಿಗೆ....

 ಬ್ರಾಹ್ಮಣರು ಮೌಢ್ಯ ಬಿತ್ತಿದರು”

“ಬ್ರಾಹ್ಮಣರು ಶೋಷಣೆ ಮಾಡಿದರು”

“ಬ್ರಾಹ್ಮಣರು ದಬ್ಬಾಳಿಕೆ ಮಾಡಿದರು”

“ಬ್ರಾಹ್ಮಣರು ದುಡ್ಡು ಮಾಡಿದರು”

“ಬ್ರಾಹ್ಮಣರು ಪೂಜೆ ಮಾಡಿ ಜ್ಯೋತಿಷ್ಯ ಹೇಳಿ ದುಡ್ಡು ಸಂಪಾದಿಸ್ತಾರೆ”

“ಬ್ರಾಹ್ಮಣರು ಉಳಿದವರನ್ನು ಏಳೊಕೆ ಬಿಟ್ಟಿಲ್ಲ.”

ಹೀಗೆಲ್ಲ ಬ್ರಾಹ್ಮಣರ ಬಗ್ಗೆ ಅಪವಾದಗಳಿವೆ. ಇದನ್ನೆಲ್ಲ ನಾವು ಸಹಿಸಿಕೊಂಡು ಬಂದಿದ್ದೇವೆ. ಮುಂದೆಯೂ ಸಹಿಸಿಕೊಂಡು ನಾವು ನಮ್ಮ ಏಳಿಗೆ ಕಡೆ ಗಮನ ಕೊಟ್ಟು ಅದನ್ನು ಸಾಧಿಸುತ್ತೇವೆ. ಆದರೂ ಬ್ರಾಹ್ಮಣರನ್ನು ಅಸಹಿಷ್ಣುಗಳು ಎನ್ನುತ್ತಾರೆ. ಬಹುಶಃ ಬ್ರಾಹ್ಮಣರಷ್ಟು ಊರು ಬಿಟ್ಟು ಬೇರೆ ಊರು ಸೇರಿರುವವರು ಇನ್ಯಾರೂ ಇಲ್ಲ.

ಒಂದು ಸಣ್ಣ ಉದಾಹರಣೆ. ನಮ್ಮ ಹವ್ಯಕರದ್ದೇ ತೆಗೆದುಕೊಳ್ಳೋಣ. ಕೆಲವರು ನಾವು ಅಹಿಚ್ಛತ್ರದಿಂದ ಬಂದಿದ್ದು ಎನ್ನುತ್ತಾರೆ ಇನ್ನೂ ಕೆಲವರು ನಾವು ಅಸ್ಸಾಮಿನಿಂದ ಬಂದವರು ಎನ್ನುತ್ತಾರೆ. ಆದರೆ, ಇನ್ನೂ ಕೆಲವರು ಹೇಳುವುದು ನಾವು ಕರ್ನಾಟಕದಿಂದ ವಲಸೆ ಹೋಗಿ ಮತ್ತೆ ಇಂದಿನ ಉತ್ತರ ಕನ್ನಡಕ್ಕೆ ತಿರುಗಿ ಬಂದವರು ಎಂದು. ನನಗನ್ನಿಸುವುದು ವಾದವೇ ಸತ್ಯ ಎಂದು. ಕಾರಣ ಸ್ಕಾಂದ ಪುರಾಣ ಗುರುತಿಸಿರುವ ದ್ರಾವಿಡ ಬ್ರಾಹ್ಮಣರಲ್ಲಿ ನಮ್ಮ ಪಂಗಡವೂ ಒಂದು. ಇದು ಒತ್ತಟ್ಟಿಗಿರಲಿ. ಈಗ ವಲಸೆ ವಿಚಾರದ ಕಡೆ ಬರೋಣ

ಕರ್ನಾಟಕದಿಂದ ಉತ್ತರ ಭಾರತದ ಕಡೆ. ಅಲ್ಲಿಂದ ಮತ್ತೆ ಕರ್ನಾಟಕಕ್ಕೆ. ಕರ್ನಾಟಕದಲ್ಲಿಯೂ ಉತ್ತರ ಕನ್ನಡ ಭಾಗದಿಂದ ದಕ್ಷಿಣ ಕನ್ನಡದ ಭಾಗಕ್ಕೆ ಮತ್ತೆ ಅಲ್ಲಿಂದ ಸಾಗರ ಶಿವಮೊಗ್ಗದ ಕಡೆ. ಇತ್ತಿತ್ತಲಾಗಿ ಕೃಷಿಯಲ್ಲಿನ ಸಮಸ್ಯೆಗಳಿಂದ ಮತ್ತು ಸಿಗುತ್ತಿರುವ ವಿಪುಲ ಅವಕಾಶಗಳ ದೆಸೆಯಿಂದ ಬೆಂಗಳೂರು, ಮುಂಬಾಯಿ ಮತ್ತು ಹೊರದೇಶಗಳಿಗೆ.... ಹೀಗಿದೆ ನಮ್ಮ ವಲಸೆಯ ಸರಣಿ.

ಈಗ ಆರಂಭದಲ್ಲಿ ಬರೆದ ವಾಕ್ಯಗಳತ್ತ ಸಾಗೋಣ. ನಾವೇ ಸ್ವಯಂ ನೆಲೆ-ಜೀವನ ಅರಸಿ ವಲಸೆ ಮಾಡುತ್ತಿರುವಾಗ ಅನ್ಯರನ್ನು ಶೋಶಿಸುವ ಸಾಧ್ಯತೆಯಾದರೂ ಎಂಟು ಎಷ್ಟು? ಇದಕ್ಕೆ ನಮ್ಮ ಸಾಮಾನ್ಯ ಅವಗಾಹನೆ ಸಾಕು

ಬ್ರಾಹ್ಮಣರು ಪೂಜೆ ಹೆಸರಲ್ಲಿ ಮೋಸ ಮಾಡುತ್ತಾರೆ ಅಂತ ಹೇಳ್ತೀರಲ್ಲಾ, ನೀವು        ನಿಮ್ಮದೇ ದೇವಸ್ಥಾನ ಕಟ್ಟಿಸಿ ಪೂಜೆ ಮಾಡಿ ಸ್ವಾಮಿ ಬೇಡ ಅನ್ನೋರು ಯಾರುಇನ್ನೂ ಜ್ಯೋತಿಷ್ಯ, ಅದು ಮೋಸ ಅಂತಾದರೆ ಅವರ ಹತ್ತಿರ ಹೋಗುವ ಜನರನ್ನು ಜಾಗೃತರನ್ನಾಗಿಸಿ. ಕಡ್ಡಿ ಜ್ಯೋತಿಷ್ಯ, ಬುಡಬುಡಿಕೆ ಜ್ಯೋತಿಷ್ಯ, ಕಣಿ ಹೇಳುವವರು ಬ್ರಾಹ್ಮಣರಲ್ಲ. ಆದರೂ ನೀವು ಜ್ಯೋತಿಷ್ಯದ ಹೆಸರಲ್ಲಿ ಬ್ರಾಹ್ಮಣರು ಮೋಸ ಮಾಡುತ್ತಿದ್ದಾರೆ ಅಂತ ಬೊಬ್ಬೆ ಹೊಡೆಯೋದು ಯಾಕೆ? ಉಳಿದವರೆಲ್ಲ ಟ್ಯೂಬ್ ಲೈಟ್ ಬರ್ನಾಗಿರೋಲೈಟ್ ಅಂತೆಲ್ಲಾ ಹೇಳುವ ಮಹಾನುಭಾವ ಪ್ರಗತಿಪರರಿಗೆ ಇಷ್ಟೂ ವಾಸ್ತವದ ಅವಗಾಹನೆ ಇಲ್ಲವಾಯಿತೇ?

ಇನ್ನು ಬ್ರಾಹ್ಮಣರುನಿಮ್ಮ ಅವಕಾಶಗಳನ್ನು ಕಿತ್ತುಕೊಂಡರು ಅಂತ ಬೊಬ್ಬೆ ಹೊಡೀತೀರಿ. ಹಾಗಾದರೆ, ಪುಲ್ವಾಮಾದಲ್ಲಿ ನಡೆದ ದುರಂತದಲ್ಲಿ ಮಡಿದ ಸೈನಿಕರಲ್ಲಿ ಜಾತಿ ನೋಡಿದ್ದು ? ಇನ್ನೂ ಇರಬಹುದು. ಎಸ್ ಇತ್ಯಾದಿ ಪರೀಕ್ಷೆಗಳಲ್ಲಿ ಬ್ರಾಹ್ಮಣರು ಪಾಸ್ ಆಗ್ತಿದ್ದಾರೆ ಇದು ನಿಮ್ಮ ಆಕ್ಷೆಪದ ವಿಷಯವಾದರೆ, ನನ್ನದೊಂದು ಪ್ರಶ್ನೆ, ಬ್ರಾಹ್ಮಣರು ಪರೀಕ್ಷೆಯಲ್ಲಿ ಪಾಸ್ ಆಗಿದ್ದು ತಪ್ಪು ಯಾಕೆ? ಇನ್ನೂ ಅಕ್ರಮ ಇದೆ ಅನ್ನೋದಾದರೆ, ಉಳಿದವರು ಎಷ್ಟೋ ಬ್ರಾಹ್ಮಣರಲ್ಲದವರೂ ಪಾಸ್ ಆಗ್ತಿದ್ದಾರೆ. ಅವರ ಶ್ರಮಕ್ಕೂ ಬೆಲೆ ಇಲ್ಲವೇ? ಪರೀಕ್ಷೆಗಳಲ್ಲಿ ಕಳೆದ ಎಪ್ಪತ್ತೈದು ವರ್ಷಗಳಿಂದಲೂ ಅಕ್ರಮ ನಡೆಯುತ್ತಿದೆಯಾ? ಬ್ರಾಹ್ಮಣ ವಿರೋಧಿ ಪಕ್ಷಗಳು, ಬ್ರಾಹ್ಮಣ ವಿರೋಧಿ ಸಮಾನತೆಯ ಹರಿಕಾರ ಸಾಮಾಜಿಕ ಕಾರ್ಯಕರ್ತರು, ಪತ್ರಿಕೆಗಳು ಇದ್ದರೂ ಅಕ್ರಮ ಯಾಕೆ ನಿಲ್ಲುತ್ತಿಲ್ಲ. ಅಕ್ರಮ ತಡೆಯುವುದರ ಕಡೆ ಗಮನ ಹರಿಸುವುದು ಬಿಟ್ಟು ಬ್ರಾಹ್ಮಣ ನಿಂದನೆಯಲ್ಲೇಕೆ ಕಾಲ ಕಳೆಯುತ್ತಿದ್ದೀರಿ? ಸಾಲದ್ದಕ್ಕೆ ಸರಕಾರ ರಚಿಸುವ ಬೀಳಿಸುವಷ್ಟು ಶಕ್ತಿ ಇದೆ ಎನ್ನುವ ಅನೇಕ ಪತ್ರಕರ್ತರು, ಸಾಹಿತಿಗಳು ನಿಮ್ಮಲ್ಲಿದ್ದಾರೆ ಅವರು ದುರ್ಬಲರೇ?

     ಸ್ವಾಮಿಬ್ರಾಹ್ಮಣರ ಜನಸಂಖ್ಯೆಯೇ ಕಡಿಮೆ. "ಎಷ್ಟು ಪರ್ಸೆಂಟ್ ಐದೀರಾ ನೀವು" ಎಂದು ನಮ್ಮೂರಿನ ನಾಯಕರೊಬ್ಬರು ಕೇಳಿದ್ದರಲ್ಲ. ಅವರಲ್ಲೂ ಹೆಚ್ಚಿನವರು ಅನೇಕ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು. ಇನ್ನೂ ಕೆಲವರು ವಕೀಲಿಕೆ, ಡಾಕ್ಟರಿಕೆ, ಚಾರ್ಟರ್ಡ್ ಅಕೌಂಟಂಟ್ ಇತ್ಯಾದಿ ವೃತ್ತಿಪರರು. ಇನ್ನೂ ಕೆಲವರು ಸ್ವಯಂ ಉದ್ಯೋಗ ಮಾಡುವವರು. ಇವರು ನಿಮ್ಮ ಅವಕಾಶ ಹೇಗೆ ಕಿತ್ತುಕೊಂಡರು? ಜ್ಯೋತಿಷ್ಯ ಪೂಜೆ ಮೊದಲಾದ ಮೌಢ್ಯಗಳ ಮಧ್ಯೆ ಇರುವ ಬ್ರಾಹ್ಮಣರಿಗೆ ಇದೆಲ್ಲಾ ಬುದ್ಧಿವಂತಿಕೆ ಹೇಗೆ ಸಾಧ್ಯ?

ಈಗೀಗ ಖಾಸಗಿ ಕಂಪನಿಗಳಿಂದ ವಿಪುಲ ಅವಕಾಶಗಳಿವೆಯಲ್ಲ. ನೀವು ಸರಕಾರಿ ಕೆಲಸವೇ ಬೇಕು ಅಂತ ಬ್ರಾಹ್ಮಣರ ವಂಚನೆಗೆ ಒಳಗಾಗುವ ಬದಲು ಅಲ್ಲಿ ಪ್ರಯತ್ನಿಸಬಹುದಲ್ಲ. ನಿಮಗೆ ಏನು ತೊಂದರೆ?

ಈಗ್ಗೆ ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಸಾಗರದ ಅಂದಿನ ಸುಪ್ರಸಿದ್ಧ ಪತ್ರಿಕೆ ಮಣ್ಣಿನ ವಾಸನೆಯಲ್ಲಿ ಒಂದು ಲೇಖನ ಬಂದಿತ್ತು ಬರೆದವರು ಕ್ರಾಂತಿಕಾರಿ ಚಿಂತನೆಗಳುಳ್ಳ ಸಮಾಜಮುಖಿ ಸಂವೇದನೆಯ ಜಾತ್ಯತೀತ ಪ್ರಗತಿ ಪರರು. ಅವರು ಬರೆದ ಲೇಖನದ ಸಾರಾಂಶ ಹೀಗಿತ್ತು. ತಾವು ಪ್ರತಿನಿಧಿಸುವ ಜಾತಿಯವರ ಉದ್ಯೋಗ ಹೆಂಡ ಕಾಯಿಸುವುದಲ್ಲ; ಜಾತಿಯವರು ಸೈನಿಕರ ಉದ್ಯೋಗ ಮಾಡುವವರು ಅಂತ. ಇದನ್ನು ಇಲ್ಲಿ ಪ್ರಸ್ತಾಪಿಸಿದ್ದು ಯಾಕೆಂದರೆ, ಹೆಂಡ ಕಾಯಿಸುವುದು ಸ್ಮಾಜಕ್ಕೆ ಹೆಚ್ಚು ಘಾತುಕವೊ ಜ್ಯೋತಿಷ್ಯ ಪೂಜೆದಿ ಕೈಂಕರ್ಯಗಳೋಜಾತ್ಯತೀತ ಪ್ರಗತಿಪರರೇ ಹೆಂಡ ಕಾಯಿಸುವುದು ಒಂದು ಜಾತಿಯ ಕಾಯಕ ಎಂದು ಜಾತೀಯತೆ ಮಾಡಿದ ಮೇಲೂ ಬರೆ ಬ್ರಾಹ್ಮಣರನ್ನು ನಿಂದಿಸುವುದು ಯಾಕೆ

ಬ್ರಾಹ್ಮಣರು ದಕ್ಷಿಣೆಗಾಗಿಯೇ ಪೂಜೆ ಮಾಡುತ್ತಾರೆ ಎಂದು ವಾದಿಸುವ ನಿಮ್ಮ ನಿಲುವನ್ನು ತುಸು ಹೊತ್ತು ಸರಿ ಎಂದು ಪರಿಗಣಿಸೋಣ. ಬ್ರಾಹ್ಮಣರು ದಕ್ಷಿಣೆಯ ಆಸೆಗೆ ಪೂಜೆ ಮಾಡಿದರೂ ನಿಮಗೆ ಒಳಿತಾಗಲಿ, ಇನ್ನೂ ಒಂದಿಷ್ಟು ಪೂಜೆ ಹೆಚ್ಚು ಮಾಡಿಸಲಿ ಎಂದೇ ಆಶಿಸುತ್ತಾರೆ. ನಿಮ್ಮ ಒಳಿತನ್ನು ಬಯಸುತ್ತಾರೆ. ಆದರೆ ಹೆಂಡ ಕಾಯಿಸುವವರು? ಜಾತಿ ಯಾವುದಾದರೂ ಇರಲಿ ಒಳ್ಳೆಯದಂತೂ ಅಲ್ಲ. ಕೆಲವು ಊರಿಗಳು ಕಳ್ಳಭಟ್ಟಿಗೆ ಎಷ್ಟು ಹೆಸರುವಾಸಿ ಎಂದರೆ ಯಾವನಾದರೂ ತಲೆ ಬುಡ ಇಲ್ಲದ ಮಾತಾಡಿದರೆ ಕೇಳುವುದಿದೆ, ಊರಿಗೆ ಹೋಗಿದ್ದೆಯಾ ಅಂತ.

ಬ್ರಾಹ್ಮಣರನ್ನು ನಿಂದಿಸಿದ ಅರ್ಧದಷ್ಟಾದರೂ ಹೆಂಡ ಕಾಯಿಸುವವರಿಗೆ ಬುದ್ಧಿ ಹೇಳಿ. ಸಮಾಜ ಸುಧಾರಿಸುತ್ತದೆ.

Thursday, June 9, 2022

ಸ...

ನಾವು ಶಾಲೆಗೆ ಹೋಗುವಾಗ ಒಬ್ಬರು ಮೇಷ್ಟ್ರು ಬರುತ್ತಿದ್ದರು. ಅವರು ಒಮ್ಮೆ ಅವರ ಮಾಜಿ ಸಹೋದ್ಯೋಗಿ ಒಬ್ಬರು ಪಾಠ ಮಾಡುತ್ತಿದ್ದ ಬಗೆಯನ್ನು ಹಂಚಿಕೊಂಡಿದ್ದು ಈಗ ಯಾಕೋ ನೆನಪಾಗ್ತಾ ಇದೆ.

ಆ ಸಹೋದ್ಯೋಗಿಗಳಿಗೆ ಪಾಪ ಶ ಷ ಸ ಮಧ್ಯದ ವ್ಯತ್ಯಾಸವೇ ಗೊತ್ತಿರಲಿಲ್ಲ. ಎಲ್ಲವಕ್ಕೂ ಸ ಎನ್ನುವ ಏಕಾಕ್ಷಾರೀ ಪ್ರಯೋಗ ಮಾಡುತ್ತಿದ್ದರು.

ಶಿವಾಜಿಗೆ ಸಿವಾಜಿ ಎಂದು ಹೇಳಿ ಅದನ್ನು ಮಕ್ಕಳು ಹಾಗೆಯೇ ಬರೆದಿದ್ದರು. ಒಬ್ಬ ತಪ್ಪು ಬರೆದಿದ್ದರೆ ಬಡಿಯಬಹುದಿತ್ತು. ಎಲ್ಲರೂ ಹಾಗೆ ಬರೆದರೆ?

ಇನ್ನೊಮ್ಮೆ ಶಮ್ಮೇಳನ ಅಂತ ಬರೆಸಿದ್ದರು. ಮಗದೊಮ್ಮೆ, ಕ್ಸತ್ರಿಯ ಅಂದಿದ್ದರು. 

ಹೆಡ್ ಮೇಷ್ಟರು ಈ ಮೇಷ್ಟರಿಗೆ ಒಂದು ಉಪಾಯ ಹೇಳಿಕೊಟ್ಟರು. "ನೀವು ಸ ಅಂತಲೇ ಹೇಳೋದು ಅಂತಾದರೆ ಒಂದು ಕೆಲಸ ಮಾಡಿ. ನೀವು ಹೇಳುವುದು ಯಾವ ಸ ಅಂತ ಹೇಳಿ ಸಂಕದ ಸ ವೋ ಸಣ್ಮುಖದ ಸ ವೋ ಸರಸ್ವತಿ ಸ ವೋ ಅಂತ ಹೇಳಿ. ಆಗ ಮಕ್ಕಳಿಗೂ ಸುಲಭ, ನಿಮ್ಮ (ನಮ್ಮ) ಮರ್ಯಾದೆಯೂ ಉಳಿಯುತ್ತದೆ"

ಅಷ್ಟರ ನಂತರ ನೋಟ್ಸ್ ಕೊಡುವಾಗ ಶ ಎನ್ನ ಬೇಕಾದಲ್ಲಿ ಮೇಷ್ಟರು ಸಂಕದ ಸ ಎನ್ನುತ್ತಿದ್ದರು. ಷ ಎನ್ನ ಬೇಕಾದಲ್ಲಿ ಸಣ್ಮುಖದ ಸ ಎನ್ನುತ್ತಿದ್ದರು. ಸ ಎನ್ನಬೇಕಾದಲ್ಲಿ ಸರಸ್ವತಿ ಸ ಎನ್ನುತ್ತಿದ್ದರು.

ಮಕ್ಕಳನ್ನು ಇಂಥ ಗೊಂದಲದಿಂದ ತಪ್ಪಿಸಲು, ಅವರಿಗೆ ಸರಿಯಾದ ಭಾಷೆ ಕಲಿಸಲು, ಜೊತೆಯಲ್ಲಿಯೇ ಭಾಷಾ ಸೌಂದರ್ಯ ತೋರಿಸಲು ಸಂಕರ ಶಂಕರ ಎನ್ನುವ ಪ್ರಯೋಗಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ ಅಷ್ಟೇ. ಇಲ್ಲಿ ಆಚಾರ್ಯ ಶಂಕರರಿಗೆ ಯಾವ ಅವಮಾನವೂ ಆಗಿಲ್ಲ.

ಮಜಾ ನೋಡಿ. ಇಲ್ಲಿ ಬ್ರಾಹ್ಮಣರು ಸಿಟ್ಟಾಗಬೇಕಿತ್ತು. ಆದರೆ ಇಂಥ ಚೀಪ್ ರೇಟ್ ಹುಳುಕುತನ ಮಾಡಿದ್ದು ಅದ್ಯಾವುದೋ Gnany ಎಂಬವ. ಇದನ್ನು ನೋಡಿ ತಕ ಥೈ ಎಂದು ಕುಣಿಯುತ್ತಿರುವವ ಎಲ್ಲರ ಕನ್ನಡದ ಬೊಂಬಡಿ ಹೊಡೆಯುವ ಕುಗ್ವೆ.

ವಾಕ್ಯವೊಂದನ್ನು ಸರಿಯಾಗಿ ಓದಲು ಅಥವಾ ಅರ್ಥೈಸಲು ಬಾರದ ಇವರೆಲ್ಲಾ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಾತಾಡ್ತಾರೆ. ಇದು ಸೋಜಿಗ ಅಲ್ಲ. ಹಾಸ್ಯಾಸ್ಪದ. ಇಂಥವರನ್ನು ಆದಷ್ಟು ಕಡೆಗಣಿಸಿ.
ಓದದೇ ಬರೆಯುವ ಇಂಥವರನ್ನು ಏನು ಮಾಡಬೇಕು ಅಂತ ಸರ್ವಜ್ಞ ತನ್ನ ವಚನದಲ್ಲಿ ಹೇಳಿದ್ದಾನೆ. ಇವರು ಅದನ್ನೂ ಓದಲಿಲ್ಲವೇ?