Friday, August 17, 2018

ವಾಜಪೇಯಿಯವರ ಕೆಲವು ನೆನಪು

ವಾಜಪೇಯಿಯವರು ಒಬ್ಬ ಅದ್ಭುತ ವಾಗ್ಮಿ. ಅವರ ಮಾತುಗಳಲ್ಲಿ ತಿಳಿ ಹಾಸ್ಯ ತಾನಾಗಿ ಹೊಮ್ಮಿ, ಸಂದರ್ಭದ ತೂಕ ಹೆಚ್ಚಿಸುತ್ತಿತ್ತು. ಅಪಹಾಸ್ಯ ಮಾಡದೆಯೇ ತಿಳಿಹಾಸ್ಯವನ್ನೂ ಗಂಭೀರವಾಗಿ ಮಾಡುತ್ತಿದ್ದ ಮೇಧಾವಿಯಾಗಿದ್ದರು. ಅವರ ಕೆಲವು ವಿಚಾರಗಳು ನೆನಪಾಯಿತು.

ವಾಜಪೇಯಿಯವರು ಪ್ರಧಾನಿಯಾಗಿದ್ದಾಗ, ಬಿಹಾರದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿತ್ತು. ಅಂದಿನ ಸ್ಪೀಕರ್ ಬಾಲಯೋಗಿ, ಬಿಹಾರದ ಸಂಸದರು ಮಾತ್ರ ಈ ಕುರಿತು ಮಾತಾಡುವಂತೆ ಸೂಚಿಸಿದ್ದರು. ಆದರೂ ವಾಜಪೇಯಿ ಮಾತಾಡತೊಡಗಿದರು. ಬಾಲಯೋಗಿ ಅವರು ವಾಜಪೇಯಿಯವರಿಗೆ ತಾವು ಬಿಹಾರದ ಸಂಸದರಲ್ಲ ಎಂದರು. ಅದಕ್ಕೆ ವಾಜಪೇಯಿ ನಗುತ್ತಲೇ, ನನ್ನ ಹೆಸರಲ್ಲೇ ಬಿಹಾರಿ ಎನ್ನುವ ಶಬ್ದವಿದೆಯಲ್ಲ ಎಂದು ನಕ್ಕರು.

ಹಿಂದೊಮ್ಮೆ ಅವರು ಹೊನ್ನಾವರಕ್ಕೆ ಬಂದಿದ್ದರಂತೆ. ಆಗ ಅವರಿಗೆ ಕೋಕಮ್ ಪಾನಕ ಕೊಟ್ಟು ಉಪಚರಿಸಿದ್ದರಂತೆ. ಕೋಕಮ್ ಎಂದರೆ ಕೊಂಕಣಿ, ಕನ್ನಡ ಮರಾಠಿ ಮೂರರ ಸಂಯೋಗ ಎಂದಿದ್ದರಂತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರೂ ಭಾಷಿಕರೂ ಇದ್ದಾರೆ.
ಕೋಕಮ್ ಎನ್ನುವ ಶಬ್ದ ಸಾರ್ಥಕ್ಯ ಕಂಡಿತಲ್ಲ.

ಭಾರತ ರತ್ನ ಪ್ರಶಸ್ತಿ ಅವರಿಗೆ ಸಿಕ್ಕಿದ್ದು ಆ ಪ್ರಶಸ್ತಿಯ ಸಾರ್ಥಕತೆ. ಸಂಸ್ಕೃತ ಭೂಯಿಷ್ಠವಾದ ಅವರ ಖಡಿ ಬೊಲೀ ಹಿಂದಿ ಮಾತಾಡುವವರು ಇನ್ಯಾರು?

No comments:

Post a Comment