ಅಂತು ಬಸ್ಸು ಮತ್ತೆ ಹೊರಟಿತು. ಮತ್ತೆ ಅದೇ ಹೆಂಗಸಿನ ಗಲಾಟೆ, ನಿದ್ದೆಯಿಲ್ಲ. ಈ ಎಲ್ಲ ಹಳವಂಡಗಳ ಮದ್ಯೆ ಪರೋಟ ಮಾಡೋನು ಕನಿಸಿನ ಹಾಗೆ ಕಂಡ.
Thursday, January 6, 2011
ಮಧ್ಯ ರಾತ್ರಿಯ ಕನಸುಗಳು...
ಚಾರಣಕ್ಕೆ ಹೊರಟ ನಮಗೆ ರಾತ್ರೆ ನಿದ್ದೆಯಿಲ್ಲ. ಪಕ್ಕಕ್ಕೆ ಕುಳಿತ ಹೆಂಗಸು ತಾನು ನಿದ್ದೆ ಮಾಡದೇ ತನ್ನ ಮಕ್ಕಳಿಗೂ ನಿದ್ದೆ ಮಾಡಲು ಬಿಡದೆ ಒಂದೇ ಸಮನೆ ವರಾತ ಹಚ್ಚಿಕೊಂಡಿದ್ದಳು. ಅವಳ ಗಲಾಟೆಯಿಂದ ನಮಗೂ ನಿದ್ದೆ ಬರಲ್ಲಿಲ್ಲ. ಅಂತೂ ಬಸ್ಸು ಒಂದು ಹೋಟೆಲ್ ಮುಂದೆ ನಿಂತಿತು. ಆ ಹೋಟೆಲ್ ಮುಂದೆ ಪರೋಟ ಮಾಡಲು ಕಡಪ ಕಲ್ಲಿನ ಮೇಲೆ ಒಂದು ಬುಟ್ಟಿ ಹಿಟ್ಟು ನಾದುತ್ತಿರುವ ಕರಿ ಮನುಷ್ಯ ಕಂಡ. ತದೇಕ ಚಿತ್ತ ದಿಂದ ಹಿಟ್ಟು ನಾದುತ್ತಿದ್ದ. ನಾವೆಲ್ಲಾ ಹೆಂಗಸಿಗೆ ಬಯುತ್ತ ಬಸ್ಸಿನ ಕೆಳಗೆ ಇಳಿದ್ವಿ. ರವಿ ಪರೋಟ ಮಾಡುತ್ತಿರುವವನ್ನನ್ನು ನೋಡಿ ಹಿಟ್ಟನ್ನು ನೆಲದ ಮೇಲೆ ಹಾಕಿಕೊಂಡಿದ್ದರೆ ಸುಲುಭವಾಗುತ್ತಿತ್ತು ಎಂದ. ರಾತ್ರಿ ಊಟ ಮಾಡದೇ ಹಸಿದಿದ್ದ ಹೇರಂಬ ಒಂದು ತಟ್ಟೆ ಪರೋಟ ತಂದೇ ಬಿಟ್ಟ. ಪರೋಟ ಜೊತೆ ನಂಜಿಕೊಳ್ಳಲು ಸಾರನ್ನು ಕೊಟ್ಟಿದ್ದರು. ಸಾರಿನಲ್ಲಿದ್ದ ಎಣ್ಣೆ ನೋಡಿ ರವಿ ಎರಡೂ ಪ್ರತ್ಯೇಕವಾಗಿ ಕೊಟ್ಟಿದ್ದಾರೆ ಚೆನ್ನಾಗಿತ್ತು ಎಂದ. ಆ ಕರಿ ಮನುಷ್ಯನ ಬನಿಯನ್ ಗೂ ಹಿಟ್ಟಿನ ಬಣ್ಣಕ್ಕೂಎದ್ದು ಕಾಣುವಂತ ವ್ಯತ್ಯಾಸ ಇತ್ತು. ಅದನ್ನು ನೋಡಿ ಅರುಣ surf ನ advertise ಗೆ ಈ ಸನ್ನಿವೇಶ ಸರಿಯಾಗಿದೆ ಎಂದ.
Subscribe to:
Post Comments (Atom)
0 comments:
Post a Comment